“ಹೊರ ಮೈಯ ಅಥವಾ ಬಾಹ್ಯ ರೋಗನಿರೋಧಕ ಪ್ರತಿಕ್ರಿಯೆ”ಯ ಸಂಶೋಧನೆಗಳಿಗಾಗಿ 2025ರ ವೈದ್ಯಕೀಯ ನೊಬೆಲ್ ಪ್ರಶಸ್ತಿ
ರೋಗನಿರೋಧಕ (ಇಮ್ಯೂನ್) ವ್ಯವಸ್ಥೆಯು ಜೀವಿವಿಕಾಸದಲ್ಲಿ ನಾವು ಪಡೆದಕೊಂಡ ಅತ್ಯಂತ ಪ್ರಭಾವಶಾಲಿ ಹಾಗೂ ಮಹತ್ವವಾದ ಗುಣವಾಗಿದೆ. ಅದು ಪ್ರತಿದಿನವೂ ನಮ್ಮ ದೇಹವನ್ನು ಆಕ್ರಮಿಸುವ ಸಾವಿರಾರು ವಿಭಿನ್ನ ವೈರಸ್‌ಗಳು, ಬ್ಯಾಕ್ಟೀರಿಯಾಗಳು ಮತ್ತು ಇತರ ಸೂಕ್ಷ್ಮಜೀವಿಗಳಿಂದ ನಮ್ಮನ್ನು ರಕ್ಷಿಸುವ ಕಾರ್ಯವನ್ನು ನಿರ್ವಹಿಸುತ್ತದೆ. ನಮ್ಮೊಳಗೆ ಕಾರ್ಯನಿರ್ವಹಿಸುವಂತಹಾ ಸಮರ್ಪಕವಾದ…
