ಉಷ್ಣವಲಯದ ಸೇಬು -ಪೇರಲ/ಸೀಬೆ: Psidium guajava
ಪೇರಲ, ಪೇರಳೆ, ಪೆರುಕಾಯಿ, ಪ್ಯಾರಲಕಾಯಿ, ಸೀಬೆ, ಚೇಪೆಕಾಯಿ ಹೀಗೆ ಕನ್ನಡದಲ್ಲೇ ನಾಲ್ಕಾರು ಹೆಸರಿನಿಂದ ಕರೆಯಿಸಿಕೊಂಡ ಸಸ್ಯ, ಭಾರತೀಯವಲ್ಲ ಅಂದರೆ ಅಚ್ಚರಿಯಾದೀತು. ಇಡೀ ದೇಶದ ಬಹುಪಾಲು ಪ್ರದೇಶದಲ್ಲಿ ಬೆಳೆಯುವ ಸೀಬೆಯು ಅದೆಷ್ಟು ಜನಪ್ರಿಯ ಎಂದರೆ, ಇದು ನಮ್ಮದಲ್ಲ ಎಂದರೆ ನಂಬುವುದೇ ಕಷ್ಟ. ಆದರೆ…