ತಾಜಾ ಬಳಕೆ ಹಾಗೂ ಸಂಸ್ಕರಣೆ ಎಲ್ಲಕ್ಕೂ ಒಗ್ಗುವ ಸೊಪ್ಪು ಪಾಲಕ್ : Spinacia oleracea
ನಾನು ಆಗಷ್ಟೇ ಸ್ನಾತಕೋತ್ತರ ಪದವಿ ಮುಗಿಸಿ, ಪಿಎಚ್.ಡಿ.ಗೆ ತಯಾರಿ ನಡೆಸುತ್ತಿದ್ದ ದಿನಗಳು. ಸೆಮಿನಾರು ಒಂದರಲ್ಲಿ ಹಿರಿಯರಾದ ಪ್ರೊ. ಜೆ. ಆರ್. ಲಕ್ಷಣರಾವ್ ಅವರನ್ನು ಮೊಟ್ಟ ಮೊದಲು ಭೇಟಿಯಾಗಿದ್ದೆ. ಲಕ್ಷಣರಾಯರು ಕೃಷಿವಿದ್ಯಾರ್ಥಿಯಾಗಿದ್ದ ನನಗೆ ಸ್ಪಿನಾಚ್ ಗೆ ಪಾಲಕ್ ಹೆಸರು ಹೇಗೆ ಬಂತು? ಎಂಬ…