ತುಂಬಾ ಆಕಷ೯ಕವೇನೂ ಅಲ್ಲದ ಗಿಡ: ತುಂಬೆ – Leucas aspera
ಜೇನುತುಪ್ಪವನ್ನು ಸವಿಯದವರು ಅಪರೂಪ. ಜೇನುಗಳಾದರೋ ಹೂವುಗಳಿಂದ ಸಂಗ್ರಹಿಸಿದ ಮಕರಂದವನ್ನು ಸಂಸ್ಕರಿಸಿ ಆ ತುಪ್ಪವನ್ನು ತಯಾರಿಸಿರುತ್ತವೆ. ನಮ್ಮಲ್ಲಿ ಮಕರಂದವನ್ನೇ ನೇರವಾಗಿ ಹೂವುಗಳಿಂದ ಪಡೆದು ಸವಿದವರು ಅಪರೂಪ. ಆದಾಗ್ಯೂ ತುಂಬೆ ಹೂವಿನಿಂದ ನೇರವಾಗಿ ಮಕರಂದವನ್ನು ಹೀರಿರುವ ಬಗ್ಗೆ ಕೆಲವರಿಗಾದರೂ ನೆನಪಿದ್ದೀತು. ಈಗಲೂ ತುಂಬೆಯ ಹೂವು…