ಪುಟ್ಟ ಮೊಗ್ಗಿನಲಿ, ಪರಿಮಳವನ್ನಿಟ್ಟ ಹೆಮ್ಮರ ಲವಂಗ : Clove Syzygium aromaticum
ನಾವು ತಿನ್ನುವ ಲವಂಗವು ಕೇವಲ 1 ರಿಂದ 2 ಸೆಂ.ಮೀ ಉದ್ದದ ಪುಟ್ಟ ಮೊಗ್ಗು! ಅದರಲ್ಲೂ ಮುಕ್ಕಾಲು ಭಾಗ ತೊಟ್ಟು ಮತ್ತು ಪುಷ್ಪಪಾತ್ರೆ! ಐವತ್ತು-ಅರವತ್ತು ಅಡಿಗಳಷ್ಟು ಎತ್ತರದ ಹೆಮ್ಮರದ ಹೂಗೊಂಚಲಿನ ಪುಟ್ಟ ಹೂವಿನ ದಳಗಳಿನ್ನೂ ಅರಳಿರದಾಗಲೇ ಅದನ್ನು ಕೊಯಿಲು ಮಾಡಿ ಒಣಗಿಸಿ…