ಜಗತ್ತನ್ನೆಲ್ಲಾ ತಲುಪಿರುವ ಬೆಳೆ ಮೂಲಂಗಿ : Raphanus sativus
"ಏನು ಮಹಾ ಮೂಲಂಗಿ ಕೀಳೋ ಕೆಲಸ ಇತ್ತೇನು?” ಎನ್ನುವ ಮಾತನ್ನು ಕೇಳಿಯೇ ಇರುತ್ತೀರಿ. ಅಂದರೆ ಅಂತಹಾ ದೊಡ್ಡ ಕೆಲಸವೇನೂ ಇಲ್ಲದಿರುವುದನ್ನು ಮೂಲಂಗಿ ಕೀಳುವ ಹಾಗೂ ಅಷ್ಟೇ ಅಲ್ಲ ಅದನ್ನು ಬೆಳೆಯುವ ಸಾಹಸಕ್ಕೂ ಹೋಲಿಸುವುದುಂಟು. ಮೂಲಂಗಿ ಕೀಳುವುದು ಎಷ್ಟು ಸುಲಭವೋ, ಬೆಳೆಯುವುದೂ ಅಷ್ಟೆ…