ತಾಟಿಗೆ ಬರುವ ತಿನಿಸುಗಳನ್ನೆಲ್ಲಾ ಆವರಿಸಿರುವ “ಕಡಲೆ” – Cicer arietinum
ಮುಂಗಾರು ಆರಂಭವಾಗುತ್ತಿರುವ ಈ ದಿನಗಳಲ್ಲಿ, ಆಗಾಗ್ಗೆ ಸಣ್ಣ ಮಳೆ, ತಂಪೆನಿಸುವ ಮೋಡ ಮುಸುಕಿದ ವಾತಾವರಣವೂ ಸಹಜ. ತಂಪು ತರುವ ಮಳೆಯ ಹನಿಗಳಿರುವ ಸಂಜೆಗಳಲ್ಲಿ ಕುರುಕಲು ತಿಂಡಿಗಳಿದ್ದರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ! ಅಷ್ಟೇ ಏಕೆ, ಬಿಸಿ, ಬಿಸಿ ಬಜ್ಜಿಗಳು, ವಡೆ, ಬೋಂಡಾ, ಖಾರಾ…