ಅಡಿಕೆ-ಎಲೆಯ ಅನ್ಯೋನ್ಯತೆಯ ಸಂಬಂಧ
"ತೀರಾ ಅವರ ಮನೆಯಲ್ಲಿ ನನಗೆ ಅಂತಾ ಅಡಿಕೆ-ಎಲೆಯ ಮರ್ಯಾದೆಯಾದ್ರೂ ಬೇಡವಾ" ಹೀಗನ್ನುವ ಮಾತನ್ನು ತಾವು ಮಲೆನಾಡಿನ ಸುತ್ತ ಮುತ್ತಲಿನ ಊರುಗಳಲ್ಲಿ ಅಥವಾ ಬೇರೆಲ್ಲಿಯೂ ಕೇಳಿರಬಹುದು. ಆ ಮಾತಿನ ದಾಟಿಯಲ್ಲಿ ಆರೋಪಿಸುವ ಮನೆಯಿಂದ ತನಗೆ ಒಂದು ಅಡಿಕೆ-ಎರಡು ಎಲೆಯನ್ನು ತೆಗೆದುಕೊಳ್ಳುವ, ಆ ಮೂಲಕ…