“ನೈಸರ್ಗಿಕವಾದ ಪ್ರಯೋಗಗಳನ್ನು ಬಳಸಿ ಸಮಾಜದ ಸಮಸ್ಯೆಗಳನ್ನು ಪರಿಹರಿಸುವ” ಶೋಧಕ್ಕೆ ಅರ್ಥವಿಜ್ಞಾನದ ನೊಬೆಲ್
ಸಾಮಾನ್ಯವಾಗಿ ಪ್ರಯೋಗಗಳನ್ನು ಕೈಗೊಂಡು ಸಮಸ್ಯೆಗಳ ಕಾರಣ ಮತ್ತು ಪರಿಣಾಮಗಳನ್ನು ಹುಡುಕುವ ಅಥವಾ ಅರ್ಥಮಾಡಿಕೊಳ್ಳುವ ಕ್ರಮವನ್ನು ಕ್ಲಿನಿಕಲ್ ಸಂಶೋಧನೆ ಮುಂತಾದೆಡೆಗಳಲ್ಲಿ ಅನುಸರಿಸುತ್ತಾರೆ. ಅಲ್ಲಿ ಸಂಶೋಧಕರಿಗೆ ಭಾಗವಹಿಸುವ ಸಂದರ್ಭದ ಪರಿಚಯ ಹಾಗೂ ಮತ್ತಿತರ ವಿವರಗಳ ಸಂಪೂರ್ಣ ಅರಿವು ಇರುತ್ತದೆ. ಆದರೆ ಇಕಾನಾಮಿಕ್ಸ್ ಮುಂತಾದ ಮಾನವಿಕ…