ತನಗೆ ತಾನೆ ಸಂಜೀವಿನಿಯಾದ ದೊಡ್ಡ ಪತ್ರೆ Plectranthus amboinicus
ಸುಮಾರು ಹದಿನೈದು ವರ್ಷದಿಂದ ಗಮನಿಸುತ್ತಾ ಬಂದಿದ್ದೇನೆ. ನಮ್ಮ ಮನೆಯ ಮುಂಬಾಗಿಲ ಬಳಿಯಲ್ಲಿನ ಕುಂಡದಲ್ಲಿನ ದೊಡ್ಡ ಪತ್ರೆಯು ನಾವು ಮನೆಯಲ್ಲಿರಲಿ, ಬಿಡಲಿ, ತಿಂಗಳುಗಟ್ಟಲೆ ನೀರನ್ನೂ ಬೇಡದೆ ಬದುಕಿ ಉಳಿಯುತ್ತಲೇ ಇದೆ. ಕುಂಡದ ಮಣ್ಣು ನೀರಿಲ್ಲದೆ ಒಣಗಿ ಗಟ್ಟಿಯಾದರೂ ಅದರ ಎಲೆಗಳಲ್ಲು ತುಸು ಮಾಸಿದಂತೆ…