ಮೆಂಡೆಲೀಫ್‌ಗೆ ಇಲ್ಲದ ನೊಬೆಲ್‌ ಅವರ ಪಿರಿಯಾಡಿಕ್‌ ಟೇಬಲ್‌ನಲ್ಲಿ!

ಪಿರಿಯಾಡಿಕ್‌ ಟೇಬಲ್‌ ರಸಾಯನವಿಜ್ಞಾನದಲ್ಲಿ ಬಹು ದೊಡ್ಡ ಪರಿಕಲ್ಪನೆ! ಅಂತಹದ್ದೊಂದರ ಸಾಧ್ಯತೆಯ ಊಹೆಯನ್ನು ಮಾಡಿ ಇಡೀ ವಿಶ್ವದ ರಸಾಯನಿಕ ಮೂಲವಸ್ತುಗಳನ್ನು ಊಹಿಸಿ ಜೋಡಿಸಿ ವಸ್ತುಗಳ ಸೌಂದರ್ಯವನ್ನು ಅನಾವರಣ ಮಾಡಿದ ಕೀರ್ತಿ ಮೆಂಡೆಲೀಫ್‌ ಅವರಿಗೆ ಸಲ್ಲುತ್ತದೆ. ಸುಮಾರು 1869ರಲ್ಲೇ ಪಿರಿಯಾಡಿಕ್‌ ಟೇಬಲ್‌ (ಆವರ್ತ ಕೋಷ್ಟಕ)…

Continue Readingಮೆಂಡೆಲೀಫ್‌ಗೆ ಇಲ್ಲದ ನೊಬೆಲ್‌ ಅವರ ಪಿರಿಯಾಡಿಕ್‌ ಟೇಬಲ್‌ನಲ್ಲಿ!

ನೊಬೆಲ್‌ ಪುರಸ್ಕಾರದ ನಿರೀಕ್ಷೆಯ ಓದು-1 : ಸಾವಿರಕ್ಕೂ ಹೆಚ್ಚಿನ ಪುರಸ್ಕೃತರು.  

ಆತ್ಮೀಯರೆ ನಮಸ್ಕಾರ ಅಕ್ಟೋಬರ್‌ ತಿಂಗಳ ಮೊದಲ ವಾರ ಜಾಗತಿಕವಾದ ಸುದ್ದಿಗಳಲ್ಲಿ ನೊಬೆಲ್‌ ಬಹುಮಾನದ ಸಂಗತಿಗಳಿಗೆ ಇದ್ದಷ್ಟು ಮಹತ್ವ ಬಹುಶಃ ಮತ್ತಾವುದಕ್ಕೂ ಇರಲು ಸಾದ್ಯವಿಲ್ಲ. ಅದರಲ್ಲೂ ವಿಜ್ಞಾನದ ನೊಬೆಲ್‌ ಪುರಸ್ಕಾರಗಳಂತೂ ಇಲ್ಲಿಯವರೆಗೂ ಹೆಸರನ್ನೇ ಕೇಳಿರದ ವಿಜ್ಞಾನಿಗಳ ಕುರಿತಂತೆ ಒಮ್ಮೆಲೆ ಜಾಗತಿಕ ಮಾತುಗಳಿಗೆ ಕಾರಣರಾಗುವಂತೆ…

Continue Readingನೊಬೆಲ್‌ ಪುರಸ್ಕಾರದ ನಿರೀಕ್ಷೆಯ ಓದು-1 : ಸಾವಿರಕ್ಕೂ ಹೆಚ್ಚಿನ ಪುರಸ್ಕೃತರು.  

ಮಣ್ಣಿನ ಅರಿವು ಮತ್ತು ಗ್ರಹಿಕೆಯ ವೈಜ್ಞಾನಿಕ ವಾಸ್ತವಗಳು

ಮಾಟಿ ಕಹೇ ಕುಂಹಾರ್‌ ಸೆ,      ತು ಕ್ಯಾ ರೋಂದೇ ಓ...ಹ್!      ಏಕ್‌ ದಿನ್‌ ಐಸಾ ಆಯೇಗಾ      ಮೇ  ರೋಂದೂಂಗೀ ತೊ...        ಹದಿನೈದನೆಯ ಶತಮಾನದ ಸೂಫಿ ಸಂತ ಕಬೀರ್‌ದಾಸ್‌ ಅವರ ಒಂದು ಸುಂದರವಾದ ದೋಹಾದ ಆರಂಭದ ಸಾಲುಗಳಿವು.…

Continue Readingಮಣ್ಣಿನ ಅರಿವು ಮತ್ತು ಗ್ರಹಿಕೆಯ ವೈಜ್ಞಾನಿಕ ವಾಸ್ತವಗಳು

ಜಂಪಿಂಗ್‌ ಜೀನ್ಸ್‌ ಸಂಶೋಧಿಸಿದ ಬಾರ್ಬರಾ ಮೆಕ್ಲಿಂಟಾಕ್

ಮೆಕ್ಕೆ ಜೋಳ ಅಥವಾ ಮುಸುಕಿನ ಜೋಳದ ತೆನೆಯಲ್ಲಿ ಕಾಳುಗಳು ಎಲ್ಲವೂ ಸಾಮಾನ್ಯವಾಗಿ ಬಿಳಿ ಅಥವಾ ಹಳದಿ ಮಿಶ್ರಿತ ಬಿಳಿಯ ಬಣ್ಣವನ್ನು ಹೊಂದಿದ್ದು, ಕೆಲವೊಮ್ಮೆ ತೆನೆಯಲ್ಲಿ ಅಲ್ಲಲ್ಲಿ ಬೇರೆ ಬಣ್ಣದವನ್ನೂ ನೋಡಿರುತ್ತೀರಿ! ಕಪ್ಪು, ಕೆಂಪು ಅಥವಾ ನೀಲಿ ಹೀಗೆ.. ಇರುವ ಕಾಳುಗಳನ್ನು ನೋಡಿರಬಹುದು.…

Continue Readingಜಂಪಿಂಗ್‌ ಜೀನ್ಸ್‌ ಸಂಶೋಧಿಸಿದ ಬಾರ್ಬರಾ ಮೆಕ್ಲಿಂಟಾಕ್

ರಸಾಯನಿಕ ಹಾಗೂ ಮಾನವೀಯ ಬಂಧಗಳೆರಡನ್ನೂ ಪ್ರೊತ್ಸಾಹಿಸಿದ ಲೈನಸ್‌ ಪಾಲಿಂಗ್‌

ಲೈನಸ್‌ ಪಾಲಿಂಗ್‌, ಅವರು ವಿಜ್ಞಾನಿಯಾಗಿ ವಿಶ್ವದ ವೈಜ್ಞಾನಿಕ ಸಮುದಾಯಕ್ಕೆ ತಿಳಿದಿರುವಂತೆಯೇ ಅಮೆರಿಕಾದ ಸಾರ್ವಜನಿಕರಿಗೂ ಪರಿಚಿತರಾಗಿದ್ದರು. ನೊಬೆಲ್‌ ಪುರಸ್ಕಾರವನ್ನು ವಿಜ್ಞಾನ (ರಸಾಯನವಿಜ್ಞಾನ-1954) ಹಾಗೂ ಶಾಂತಿ (1962) ಎರಡರಲ್ಲೂ ಯಾರೊಡನೆಯೂ ಹಂಚಿಕೊಳ್ಳದೆ ತಾವೊಬ್ಬರೇ ಪಡೆದ ಏಕಮಾತ್ರ ವ್ಯಕ್ತಿ ಪಾಲಿಂಗ್‌. ರಸಾಯನವಿಜ್ಞಾನದ 20ನೆಯ ಶತಮಾನದ ಶ್ರೇಷ್ಠ…

Continue Readingರಸಾಯನಿಕ ಹಾಗೂ ಮಾನವೀಯ ಬಂಧಗಳೆರಡನ್ನೂ ಪ್ರೊತ್ಸಾಹಿಸಿದ ಲೈನಸ್‌ ಪಾಲಿಂಗ್‌

ಮಾನವ ಕುಲಕ್ಕೆ ವ್ಯಾಯಾಮವು ಏಕೆ ಮುಖ್ಯ? ಒಂದಷ್ಟು ವೈಜ್ಞಾನಿಕ ಒಳನೋಟಗಳು!

ವ್ಯಾಯಾಮವು ಮಾನವ ಕುಲಕ್ಕೆ ಅಗತ್ಯ ಎನ್ನುವುದರ ಬಗ್ಗೆ ಯಾವುದೇ ಗುಟ್ಟುಗಳೇನೂ ಇಲ್ಲ. ಅದರ ಆರೋಗ್ಯದ ಒಳಿತುಗಳ ಬಗ್ಗೆ ಸಾಕಷ್ಟೇ ಅನುಭವದ ಸಂಗತಿಗಳನ್ನು ತನ್ನೊಳಗೆ ಇಟ್ಟುಕೊಂಡಿದೆ. ಕನಿಷ್ಠ ದಿನನಿತ್ಯದ ನಡಿಗೆಯು ನಮ್ಮ ಆರೋಗ್ಯ ಸಮೀಕರಣದ ಬಹು ಮುಖ್ಯ ಪಾಲುದಾರ. ಆರೋಗ್ಯವು ನಮ್ಮ ದೇಹದ…

Continue Readingಮಾನವ ಕುಲಕ್ಕೆ ವ್ಯಾಯಾಮವು ಏಕೆ ಮುಖ್ಯ? ಒಂದಷ್ಟು ವೈಜ್ಞಾನಿಕ ಒಳನೋಟಗಳು!

ವಾತಾವರಣದ ಉಷ್ಣತೆಯಲ್ಲಿ Superconductivity : ಹೊಸ ಭರವಸೆಯ ಸಂಶೋಧನೆ; ಒಂದು ಸುಳ್ಳು ಸಂಶೋಧನೆ!

ಈ ತಲೆಬರಹದ ಅಡಿಯಲ್ಲಿ ಕಳೆದ ಮಾರ್ಚ್‌ ತಿಂಗಳಲ್ಲಿ ವಿಖ್ಯಾತ ವಿಜ್ಞಾನ ಪತ್ರಿಕೆ “ನೇಚರ್”‌ ಆದರಿಸಿದ ಅಮೆರಿಕದಲ್ಲಿ ನೆಲೆಯಾದ ಶ್ರೀಲಂಕಾದ ಭೌತವಿಜ್ಞಾನಿ ಪ್ರೊ. ರಂಗಾ ಡಿಯಾಸ್‌ ತಮ್ಮ ಟೀಮಿನ ಶೋಧನೆಯನ್ನು ಕುರಿತು ಹೆಮ್ಮೆಯಿಂದ CPUS ಪ್ರಕಟಿಸಿತ್ತು. ಇದೊಂದು ಸುಳ್ಳು ಪ್ರಕಟಣೆಯಾಗಿದ್ದು ಭೌತವಿಜ್ಞಾನಕ್ಕೆ ಎಸಗಿದ…

Continue Readingವಾತಾವರಣದ ಉಷ್ಣತೆಯಲ್ಲಿ Superconductivity : ಹೊಸ ಭರವಸೆಯ ಸಂಶೋಧನೆ; ಒಂದು ಸುಳ್ಳು ಸಂಶೋಧನೆ!

ಸಂಕೀರ್ಣ ಸಂಬಂಧಗಳ ಸೌಂದರ್ಯದ ಅನಾವರಣ: ಮೆಂಡಲೀವ್‌

ಇಡೀ ಜಗತ್ತನ್ನು ಕೇವಲ ಒಂದು ನೂರು ಕಿಟಕಿಗಳು ಮೂಲಕ ನೋಡಲು ಸಾಧ್ಯವಾಗುವುದಾದರೆ, ಅವುಗಳ ಮೂಲಕವೇ ಸಂಕೀರ್ಣ ಜಗತ್ತಿನ ಸೌಂದರ್ಯವನ್ನೂ ಅರಿಯುವುದಾದರೆ ಹೇಗನ್ನಿಸಬಹುದು? ಹೌದು ಹೆಚ್ಚೂ ಕಡಿಮೆ ನೂರರ ಆಸುಪಾಸಿನ ಕಿಟಕಿಗಳ ಮೂಲಕವೇ ಮತ್ತು ಅವುಗಳ ನಡುವಣ ಸಂಬಂಧಗಳ ಮೂಲಕವೇ ಇಡೀ ಜಗತ್ತನ್ನು…

Continue Readingಸಂಕೀರ್ಣ ಸಂಬಂಧಗಳ ಸೌಂದರ್ಯದ ಅನಾವರಣ: ಮೆಂಡಲೀವ್‌

ನಿಸರ್ಗದ ಕ್ಯಾಲೆಂಡರ್ ತಿಳಿವಿನ ಅನ್ವೇಷಕ: ಪಿನಾಲಜಿಯ ಪಿತಾಮಹ ರಾಬರ್ಟ್‌ ಮಾರ್ಶಮ್‌

ವಸಂತನ ಆಗಮನವನ್ನು ಯುಗಾದಿಯ ಹಬ್ಬವಾಗಿ ಆಚರಿಸುತ್ತಾ ಹೊಸ ಸಂವತ್ಸರಕ್ಕೆ ಆರಂಭಿಸುತ್ತೇವೆ. ಆಗ ಎಲ್ಲೆಲ್ಲೂ ಗಿಡಮರಗಳು ಮೈಯೆಲ್ಲಾ ಹಸಿರು ತುಂಬಿಕೊಂಡು ಹೊಸತನದಿಂದ ಅಣಿಯಾಗಿರುತ್ತವೆ. ಹೊಂಗೆ, ಮಾವು, ಬೇವು ಮುಂತಾದವುಗಳಲ್ಲಿನ ತಳಿರು ನವಚೇತನವನ್ನು ತರುತ್ತವೆ. ರಸ್ತೆಯ ತುಂಬೆಲ್ಲಾ ಹೂವಿನ ಮರಗಳು ಹೂ ಬಿಟ್ಟು ವಸಂತನ…

Continue Readingನಿಸರ್ಗದ ಕ್ಯಾಲೆಂಡರ್ ತಿಳಿವಿನ ಅನ್ವೇಷಕ: ಪಿನಾಲಜಿಯ ಪಿತಾಮಹ ರಾಬರ್ಟ್‌ ಮಾರ್ಶಮ್‌

ನೀರು-ನೆಲ ಕೂಡುವ ಅಳಿವೆಗಳಲ್ಲಿ ಅರಳುವ ಅರಣ್ಯ! ಕಾಂಡ್ಲ ವನ Mangrove Forests

ಒಂದೇ ಒಂದು ಸಸಿ ಅಗಾಧವಾದ ನೀರಿನ ಅಲೆಗಳಲ್ಲಿ ಮುಳುಗುತ್ತಾ ತೇಲುತ್ತಾ ಬದುಕಿನ ಆಸೆಯನ್ನು ಭದ್ರವಾಗಿಟ್ಟು ನೆಲದ ಕಡೆಗೆ ಬರಲು ನದಿಗಳು-ಹಳ್ಳಗಳು ಸಮುದ್ರಗಳ ಸೇರುವ ಅಳಿವೆಗಳ ದಾಟುವಲ್ಲಿ, ನೆಲವನ್ನು ಕಂಡು ಅಲ್ಲೇ ನೆಲೆಯಾಗುವ ಅಚ್ಚರಿಯೇ ಮ್ಯಾಂಗ್ರೊವ್‌ ಅರಣ್ಯ ಅಥವಾ ಕಾಂಡ್ಲ ವನಗಳು. ಹೌದು,…

Continue Readingನೀರು-ನೆಲ ಕೂಡುವ ಅಳಿವೆಗಳಲ್ಲಿ ಅರಳುವ ಅರಣ್ಯ! ಕಾಂಡ್ಲ ವನ Mangrove Forests