ಸೆಂಟರ್ ಫಾರ್ ಪಬ್ಲಿಕ್ ಅಂಡರ್ ಸ್ಟ್ಯಾಂಡಿಂಗ್ ಆಫ್ ಸೈನ್ಸ್(CPUS) ಬೆಂಗಳೂರು
ಮತ್ತು
ಜನಪದ ಸೇವಾ ಟ್ರಸ್ಟ್ ಮೇಲುಕೋಟೆ(ಸಹಯೋಗ)
“ವಿಜ್ಞಾನದ ಓದು ಮತ್ತು ಬರಹದ ಆನಂದ” ಕುರಿತು ಒಂದು ಕಾರ್ಯಾಗಾರ”
“ನನ್ನ ಎದುರಿನಲ್ಲಿ ಇನ್ನೂ ಅರಿವಾಗದ ಸತ್ಯದ ಮಹಾನ್ ಸಾಗರವೇ ಇರುವಾಗ, ನಾನೊಬ್ಬ ಅದರ ದಂಡೆಯಲ್ಲಿ ಆಡುತ್ತಾ, ಆಗಾಗ ನುಣುಪಾದ ಕಲ್ಲುಗಳ ಅಥವಾ ಸುಂದರವಾದ ಹವಳದ ಚಿಪ್ಪುಗಳ ಆಯ್ದುಕೊಳ್ಳುತ್ತಾ ಇರುವ ಹುಡುಗನಂತೆ ಅನ್ನಿಸುತ್ತಿದೆ” – ಐಸ್ಯಾಕ್ ನ್ಯೂಟನ್
ವಿಜ್ಞಾನದ ಮೂಲ ಆಸಕ್ತಿ ಮತ್ತು ಸೌಂದರ್ಯದ ಗ್ರಹಿಕೆಗೆ ಸತ್ಯದ ಆಳವನ್ನು ಅರಿಯದೆ ಅನ್ಯ ಮಾರ್ಗವಿಲ್ಲ. ವಿಜ್ಞಾನದ ಅರಿವಿನ ಪಯಣ ತಿಳಿದಷ್ಟೂ ಉಳಿವ ಅನಂತತೆಯ ಸ್ಥಿತಿ. ವಿಜ್ಞಾನದ ಅರಿವು ಸಂಚಿತವಾದದ್ದು. ಪ್ರತೀ ಹಂತದಲ್ಲೂ ಹಿಂದಿನದನ್ನೂ, ಮುಂದಾಗಬಹುದನ್ನೂ ಗ್ರಹಿಕೆಯ ಪರಿಧಿಯೊಳಗಿಟ್ಟು ವಾಸ್ತವವನ್ನು ಅನುಭವಿಸುವ ಪ್ರಕ್ರಿಯೆ. ಅದೊಂದು ಸಾರ್ವತ್ರಿಕವಾಗಿ ಪ್ರಭಾವಿಸುವ ಸಂಸ್ಕತಿಯ ಮಾರ್ಗದ್ದು. ಈ ಹಿನ್ನೆಲೆಯಲ್ಲಿ ವಿಜ್ಞಾನವು ಸಮಾಜದೊಡನೆ ಸಮೀಕರಿಸುವ ಆಯಾಮಗಳೊಂದಿಗೆ, ವಿಕಾಸಗೊಳ್ಳುತ್ತಲೇ ಇರುವ ಅದರ ಓದು ಮತ್ತು ಬರಹಗಳ ಮಾನದಂಡಗಳೊಡನೆ ಗ್ರಹಿಕೆಯನ್ನು ಚರ್ಚಿಸಬೇಕಿದೆ. ಓದು ಮತ್ತು ಬರಹದ ಪೂರ್ವಾಪರಗಳಿಂದ ಆರಂಭಗೊಳ್ಳುವ ಚರ್ಚೆಗಳು, ಮನುಕುಲದ ತಿಳಿವಿನ ಪಯಣದ ಹಿನ್ನೆಲೆಯಲ್ಲಿ ತೆರೆದುಕೊಳ್ಳುತ್ತಾ ಈ ಕೆಳಗಿನ ಅಧ್ಯಯನಗಳನ್ನು ಕಾರ್ಯಾಗಾರ ಉದ್ದೇಶಿಸಿದೆ.
- ವಿಜ್ಞಾನದ ಓದು ಮತ್ತು ಬರಹಕ್ಕೊಂದು ಪ್ರವೇಶ
2. ವಿಜ್ಞಾನದ ದರ್ಶನ : ಸೈದ್ಧಾಂತಿಕತೆ ಮತ್ತು ಪ್ರಾಯೋಗಿಕ ಸತ್ಯ
- ವಿಜ್ಞಾನದ ಸಂಚಿತ ಜ್ಞಾನ ಮತ್ತು ಓದಿನಲ್ಲಿ ಸಂಚಿತ ಜ್ಞಾನದ ಅನಿವಾರ್ಯತೆ
- ವಿಜ್ಞಾನದ ಸಮಾಜೀಕರಣ: ಪ್ರಾಯೋಗಿಕತೆಯ ಅನಿವಾರ್ಯತೆ
- ವೈಜ್ಞಾನಿಕ ಸಾಕ್ಷರತೆ: ವಿಜ್ಞಾನದ ಬೆರಗು ಮತ್ತು ಸೌಂದರ್ಯಗಳ ಗ್ರಹಿಕೆ
- ವಿಜ್ಞಾನದಲ್ಲಿ ವೈವಿಧ್ಯತೆ ಮತ್ತವುಗಳ ಸಂಬಂಧಗಳು
- ವಿಜ್ಞಾನದಲ್ಲಿ ಭಾಷೆ, ಕಥನ ಶೈಲಿ ಮತ್ತು ಆಪ್ತತೆಯ ಪ್ರಶ್ನೆಗಳು
- ಬರಹ/ಓದಿನ ಮಾನದಂಡಗಳು- ವಿಮರ್ಶೆ-ನಿರೂಪಗಳು
- ಓದು ಮತ್ತು ಬರಹದಲ್ಲಿ ಸಾಹಚರ್ಯ
ಕಾರ್ಯಾಗಾರದಲ್ಲಿ ನಮ್ಮೊಡನೆ ಪ್ರೊ. ಅಶೋಕ್ ರಾವ್ ((Former Director, CEDT, IISc),, ಪ್ರೊ ಪ್ರಭಾಕರ್ (ಕನ್ನಡ.ವಿ.ವಿ ಹಂಪಿ) ಸಂಪನ್ಮೂಲ ವ್ಯಕ್ತಿಗಳಾಗಿರುತ್ತಾರೆ. ಭಾಗವಹಿಸುವ ಪ್ರತಿ ಅಭ್ಯರ್ಥಿಯು 500 ಪದಗಳ ಒಂದು ವಿಜ್ಞಾನದ ಬರಹವನ್ನು ಒಂದು ವಾರ ಮುಂಚಿತವಾಗಿ ಇ-ಮೇಲ್ ಮಾಡಬೇಕಿರುತ್ತದೆ. ದಿನಾಂಕ 15 ಏಪ್ರಿಲ್ 2019ರೊಳಗೆ ನೋಂದಾಯಿಸುವ 20 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ.
ಸ್ಥಳ: ಜನಪದ ಸೇವಾ ಟ್ರಸ್ಟ್, ಹೊಸ ಜೀವನ ದಾರಿ, ಕ್ಯಾಂಪಸ್ ಮೇಲುಕೋಟೆ ಹೊರ ವಲಯ
ದಿನಾಂಕ : 27 ಮತ್ತು 28 ಏಪ್ರಿಲ್, 2019
ಶುಲ್ಕ : 2000 ರೂಪಾಯಿಗಳು (ವಿದ್ಯಾರ್ಥಿಗಳಿಗೆ ರೂ 1000/-) (ಊಟ ಮತು ವಸತಿ ಸೇರಿ)
ವಿವರಗಳಿಗೆ : ಡಾ. ಟಿ.ಎಸ್. ಚನ್ನೇಶ್, 94482 68548 & 91106 00283
E-Mail Contact drector@cfpus.org & channeshts@gmail.com