ಕಾಯಿಯನ್ನೇ ಕಾಳು ಎಂದು ಕರೆಸಿಕೊಳ್ಳುವ ಕೊತ್ತಂಬರಿ Coriandrum sativum
ಬಾಲ್ಯದಲ್ಲಿ ಯಾರನ್ನಾದರೂ ತಮಾಷೆಗೆ "ಓಹ್ ಇವನೇನು ರಾಜ..ಮಹಾರಾಜ, ಕೊತ್ತಂಬರಿ ಬೀಜ" ಎಂದು ಆಡಿಕೊಳ್ಳುತ್ತಿದ್ದೆವು. ರಾಜನಿಂದ ಏಕ್‌ದಂ ಕೊತ್ತಂಬರಿ ಬೀಜಕ್ಕೆ ಇಳಿಸಿ ಹೀಯಾಳಿಸುವ ನೆನಪುಗಳು ಯಾರಿಗಾದರೂ ಬಗೆ ಬಗೆಯ ರೂಪದಲ್ಲಿ ಇದ್ದಿರಬಹುದು. ಈ ಸಂಗತಿ ಕೊತ್ತಂಬರಿ ಸಸ್ಯಕ್ಕೂ ತಿಳಿದಿರುವ ಬಗ್ಗೆ ನನಗೆ ಆದರ…
