ತಿನಿಸುಗಳ ತಯಾರಿಯಲ್ಲಿ ತುಸು ಅಳಿಸುವ ಈರುಳ್ಳಿ : Allium cepa
ಈರುಳ್ಳಿಯು ಕೃಷಿಗೆ ಒಳಗಾಗುವ ಮೊದಲೇ ಮಾನವಕುಲದ ಆಹಾರದಲ್ಲಿ ಒಂದಾಗಿತ್ತು. ಆಗ ಅದನ್ನು ವನ್ಯ ಮೂಲದಿಂದ ಆಯ್ದು ತಂದು ತಿನ್ನುತ್ತಿದ್ದರು. ಒಂದು ಗಿಡವಾಗಿ ಈರುಳ್ಳಿಯು ತುಂಬಾ ಚಿಕ್ಕದು. ಒಟ್ಟಾರೆಯ ಸಸ್ಯಭಾಗವೂ ತೀರಾ ಕಡಿಮೆ. ಅದರ ಬೇರಿನ ಭಾಗವನ್ನು ಹೊರತುಪಡಿಸಿ ಉಳಿದದ್ದೆಲ್ಲವನ್ನೂ ಹಸಿಯಾಗಿ, ಹುರಿದು…
