ನಾಲಿಗೆಯ ಉರಿಯನ್ನೂ ಹಿತವೆನಿಸಿ ನಂಬಿಸಿರುವ ಮೆಣಸಿನಕಾಯಿ: Capsicum annuum
ಭಾರತೀಯರ ಹೊಟ್ಟೆಯನ್ನು ತುಂಬಲು ಎಲ್ಲರ ತಟ್ಟೆಯನ್ನು ನಿರ್ವಹಿಸುತ್ತಿರುವ ಅನ್ನಕ್ಕೆ, ಬಳಸುವ ಸಾರು, ಸಾಂಬಾರು, ಪಲ್ಯ, ಚಟ್ನಿ, ಮೆಲೊಗ್ಗರಣೆಯಾಗಲಿ, ಅದರ ಜೊತೆಯಾದ ಉಪ್ಪಿನಕಾಯಿ, ಹಪ್ಪಳ, ತೊಕ್ಕು ಆಗಲಿ, ಇವುಗಳೆಲ್ಲದಕ್ಕೂ ಸಾಮಾನ್ಯವಾಗಿ ಬೇಕಾಗಿರುವುದೆಂದರೆ ಮೆಣಸಿನಕಾಯಿ. "ರೆಡ್ ಹಾಟ್, ಮಿರ್ಚ್ ಮಸಾಲಾ, ಕೆಂಪು ಚಟ್ನಿ, ಹಸಿಕಾಯಿ…
