ಬೀಜಗಟ್ಟದೆಯೂ ಬದುಕುಳಿದಿರುವ ಬೆಳ್ಳುಳ್ಳಿ
ಬೆಳ್ಳುಳ್ಳಿಯ ವಿಚಾರಗಳು ಮಾತಿಗೆ ಬಂದಾಗ, ಒಂದೋ ಅದರ ವಾಸನೆಯ ಕುರಿತು ಅಥವಾ ಅದನ್ನು ತಿನ್ನದೇ ಇರುವ ಬಗೆಗೆ ಪ್ರಮುಖವಾಗಿರುವುದಂತೂ ಸತ್ಯ. ಈರುಳ್ಳಿಯ ಸಂಬಂಧಿಯೂ ಆದ ಬೆಳ್ಳುಳ್ಳಿ, ಬಣ್ಣದಿಂದ ಮಾತ್ರ ಅಪ್ಪಟ ಬಿಳಿ. ಅದಕ್ಕೇ ಬಿಳಿಯದಾದ ಉಳ್ಳಿ ಬೆಳ್ಳುಳ್ಳಿಯಾಗಿದೆ. ಹೆಚ್ಚು ನೀರಿರುವ ಉಳ್ಳಿ…
