ರಸಾಯನಿಕ ಹಾಗೂ ಮಾನವೀಯ ಬಂಧಗಳೆರಡನ್ನೂ ಪ್ರೊತ್ಸಾಹಿಸಿದ ಲೈನಸ್ ಪಾಲಿಂಗ್
ಲೈನಸ್ ಪಾಲಿಂಗ್, ಅವರು ವಿಜ್ಞಾನಿಯಾಗಿ ವಿಶ್ವದ ವೈಜ್ಞಾನಿಕ ಸಮುದಾಯಕ್ಕೆ ತಿಳಿದಿರುವಂತೆಯೇ ಅಮೆರಿಕಾದ ಸಾರ್ವಜನಿಕರಿಗೂ ಪರಿಚಿತರಾಗಿದ್ದರು. ನೊಬೆಲ್ ಪುರಸ್ಕಾರವನ್ನು ವಿಜ್ಞಾನ (ರಸಾಯನವಿಜ್ಞಾನ-1954) ಹಾಗೂ ಶಾಂತಿ (1962) ಎರಡರಲ್ಲೂ ಯಾರೊಡನೆಯೂ ಹಂಚಿಕೊಳ್ಳದೆ ತಾವೊಬ್ಬರೇ ಪಡೆದ ಏಕಮಾತ್ರ ವ್ಯಕ್ತಿ ಪಾಲಿಂಗ್. ರಸಾಯನವಿಜ್ಞಾನದ 20ನೆಯ ಶತಮಾನದ ಶ್ರೇಷ್ಠ…
