ತಿನ್ನಲೇ ಬೇಕಾದ ತರಕಾರಿ ಎಲೆಕೋಸು Cabbage, Brassica oleracea subsp. capitata.
ಎಲೆಕೋಸು ಅಥವಾ ಕ್ಯಾಬೇಜ್ (Cabbage) ಬಹುಶಃ ಸಸ್ಯಹಾರಿಗಳು -ತಿನ್ನಲೇ ಬೇಕಾದ ತರಕಾರಿ. ಜಗತ್ತಿನ ನೂರಾರು ದೇಶಗಳಲ್ಲಿ ಸಹಸ್ರಾರು ವರ್ಷಗಳಿಂದ ಬೆಳೆಯುತ್ತಿರುವ, ಬಹು ಮುಖ್ಯವಾದ ತರಕಾರಿ. ಆದರೆ ಆಸ್ಟ್ರೇಲಿಯವನ್ನು ಮಾತ್ರ ತೀರಾ ಇತ್ತೀಚೆಗೆ 18ನೆಯ ಶತಮಾನದಿಂದೀಚೆ ತಲುಪಿದೆ. ಸುಮಾರು 3000 ವರ್ಷಗಳಷ್ಟು ಹಿಂದಿನಿಂದಲೇ…
