ಸಂಶೋಧನೆಯ ಕುತೂಹಲಕ್ಕೆ ಕಾರಣವಾದ ಹಿತ್ತಿಲ ಗಿಡ: Abutilon indicum
ನಮ್ಮೂರಿನ ಮನೆಯ ಹಿತ್ತಿಲಲ್ಲಿ ಒಂದು ಗಿಡ ಬೆಳೆದಿತ್ತು. ದಟ್ಟ ಹಳದಿ ಹೂಗಳಿಂದ ಹುಟ್ಟಿ ಬಂದ ಕಾಯಿಗಳು ನಮಗೆ ತುಂಬಾ ಆಕರ್ಷಣೀಯವಾಗಿದ್ದವು. ನೋಡಲು ಮೋಟಾರಿನ "ಗಿಯರ್" ಆಕಾರದ ಹಸಿರು ಕಾಯಿಗಳು ನಮಗೆ ಆಟವನ್ನು ಆಡಲು ದೊಡ್ಡ ಅವಕಾಶಗಳನ್ನು ಕೊಡುತ್ತಿದ್ದವು. ಕಾಯಿಗಳನ್ನು ಕಿತ್ತು ಕೈಯಲ್ಲಿ…
