ಜೋಗದ ಹಸಿರಿನ ನಿತ್ಯೋತ್ಸವಕ್ಕೆ ಮಹಾರಾಷ್ಟ್ರದ ಪ್ರೊ.ಶ್ರೀರಂಗಯಾದವ್ ಹುಡುಕಿಕೊಟ್ಟ ಹಬ್ಬರ್ಡ್ ಹುಲ್ಲು Hubbardia heptaneuron
ನವೆಂಬರ್ ತಿಂಗಳಿನಲ್ಲಿ ರಾಜ್ಯದ ನೆಲದ ಪ್ರೀತಿಯು ಉಕ್ಕಿ ಸುದ್ದಿಯಾಗುತ್ತದೆ. ಡಿಸೆಂಬರಿನ ಚಳಿಯಲ್ಲಿ ತಣ್ಣಗಾಗುತ್ತದೆ. ಮತ್ತೆದೇ ಪ್ರಖರತೆಯು ಬರುವಂತಾಗಲು ಬೇಸಿಗೆಯ ಬಿಸಿಲನ್ನು ಹಾದು ಮುಂದಿನ ವರ್ಷಕ್ಕೇ ಕಾಯಬೇಕು. ಆದರೆ ನಿಸರ್ಗ ಮಾತ್ರ ನಿತ್ಯವೂ ಆಚರಣೆಯಲ್ಲಿರುತ್ತದೆ. ಅದಕ್ಕೆ ದೇಶ-ಕಾಲದ ಗಡಿಗಳ ಮಿತಿಯಿಲ್ಲ. "ಜೋಗದ ಹಸಿರಿನ…
