ಒಗ್ಗರಣೆಗೆ ಎರಡೆಸಳು-ಕರಿಬೇವು
ನಮ್ಮ ದಿನ ನಿತ್ಯದ ಊಟೋಪಚಾರದಲ್ಲಿ ಒಗ್ಗರಣೆಗೆ ಎರಡು ಬಗೆಯ ಮಹತ್ವವಿದೆ. "ಏನು...ಒಗ್ಗರಣೆಗಷ್ಟೇ..ಎಷ್ಟು ಬೇಕು..ಸ್ವಲ್ಪ ತಾನೆ....." ಎನ್ನುವುದರಲ್ಲಿ ಅಷ್ಟೇನೂ ಮಹತ್ವವಿಲ್ಲದ ಅರ್ಥ ಬರಬಹುದು. "ಆಹಾ....ರುಚಿ ಇರೋದೇ..., ಕೊನೆಗೊಂದು ಒಗ್ಗರಣೆ ಕೊಡೋದ್ರಲ್ಲಿ..... ಅದಕ್ಕೆ ಬೇಕಾದ್ದೆಲ್ಲಾ ಸರಿಯಾಗಿ ಇರಬೇಕಲ್ಲವಾ" ಹೀಗನ್ನುವುದರಲ್ಲಿ ಒಗ್ಗರಣೆಯ ಮಹತ್ವ ಹಿಗ್ಗಿರುವುದು ಕಂಡೀತಲ್ಲವೇ?…
