ನಮ್ಮ ಸುತ್ತಲಿನ ಭೌತಿಕ ಜಗತ್ತಿನ ಸಂಕೀರ್ಣ ವ್ಯವಸ್ಥೆಗಳ ತಿಳಿವಿನ ಕುರಿತ ಮಹತ್ವದ ಸಂಶೋಧನಾ ಕೊಡುಗೆ
ನಾವೆಲ್ಲಾ ಸಾಮಾನ್ಯವಾಗಿ ಭೌತವಿಜ್ಞಾನ ಎಂದರೆ ಸರಳ ಹಾಗೂ ನಿರ್ಧಿಷ್ಟವಾದ ಸಂಗತಿಗಳಿಗೆ ಸೇರಿದ್ದು ಮಾತ್ರ ಎಂದುಕೊಳ್ಳುತ್ತೇವೆ. ಉದಾಹರಣೆಗೆ ಭೂಮಿಯು ಸೂರ್ಯನ ಸುತ್ತಲೂ ಸದಾ ಗೊತ್ತಾದ ಅಂಡಾಕಾರದ ಚಲನೆಯನ್ನು ಹೊಂದಿರುವುದರ ಬಗ್ಗೆ, ಅಥವಾ ಮೂಲವಸ್ತುಗಳ ಪರಮಾಣುಗಳು ನಿಗಧಿತವಲ್ಲದ ಹರಳಿನ ರಾಚನಿಕ ವಿನ್ಯಾಸದವು ಎಂದಾಗಲಿ ಅಥವಾ…
