You are currently viewing ವಾತಾವರಣದ ಉಷ್ಣತೆಯಲ್ಲಿ Superconductivity : ಹೊಸ ಭರವಸೆಯ ಸಂಶೋಧನೆ; ಒಂದು ಸುಳ್ಳು ಸಂಶೋಧನೆ!

ವಾತಾವರಣದ ಉಷ್ಣತೆಯಲ್ಲಿ Superconductivity : ಹೊಸ ಭರವಸೆಯ ಸಂಶೋಧನೆ; ಒಂದು ಸುಳ್ಳು ಸಂಶೋಧನೆ!

ಈ ತಲೆಬರಹದ ಅಡಿಯಲ್ಲಿ ಕಳೆದ ಮಾರ್ಚ್‌ ತಿಂಗಳಲ್ಲಿ ವಿಖ್ಯಾತ ವಿಜ್ಞಾನ ಪತ್ರಿಕೆ “ನೇಚರ್”‌ ಆದರಿಸಿದ ಅಮೆರಿಕದಲ್ಲಿ ನೆಲೆಯಾದ ಶ್ರೀಲಂಕಾದ ಭೌತವಿಜ್ಞಾನಿ ಪ್ರೊ. ರಂಗಾ ಡಿಯಾಸ್‌ ತಮ್ಮ ಟೀಮಿನ ಶೋಧನೆಯನ್ನು ಕುರಿತು ಹೆಮ್ಮೆಯಿಂದ CPUS ಪ್ರಕಟಿಸಿತ್ತು. ಇದೊಂದು ಸುಳ್ಳು ಪ್ರಕಟಣೆಯಾಗಿದ್ದು ಭೌತವಿಜ್ಞಾನಕ್ಕೆ ಎಸಗಿದ ಅಪರಾಧ ಎಂದು ವಿಜ್ಞಾನದ ವಲಯದಲ್ಲಿ ಈ ವಾರ ಬಂದ ಸುದ್ದಿಯಾಗಿದೆ.

ಇದೀಗ ಅದೇ “ನೇಚರ್‌” ಪತ್ರಿಕೆಯು ಪ್ರಕಟಣೆಯನ್ನು ಹಿಂತೆಗೆದುಕೊಂಡದ್ದಲ್ಲದೆ, ಅದೊಂದು ಸುಳ್ಳು ಫಲಿತಾಂಶಗಳನ್ನು ಆಧರಿಸಿದ ವರದಿಯೆಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಪ್ರೊ. ರಂಗಾ ಡಿಯಾಸ್‌ ಅವರ ವಿರುದ್ಧ ಸಮಗ್ರ ತನಿಖೆಯನ್ನೂ ನಡೆಸಿ ವಿವರವಾದ ವರದಿಯನ್ನು ಪ್ರಕಟಿಸಿದೆ. ಪ್ರೊ. ರಂಗಾ ಡಿಯಾಸ್‌ ಅವರು ತಮ್ಮ ಜೊತೆಗಾರ ಸಹಸಂಶೋಧಕರನ್ನು ಮೋಸಗೊಳಿಸಿ ನಕಲಿ ಫಲಿತಗಳನ್ನು ಸೃಷ್ಟಿಸಿ ಹೆಚ್ಚೂ-ಕಡಿಮೆ ರೂಂ ಟೆಂಪರಾಚರ್‌- ವಾತಾವರಣದ ಉಷ್ಣತೆಯಲ್ಲಿಯೇ ಇಲೆಕ್ಟ್ರಿಸಿಟಿಯ ಟ್ರಾನ್ಸ್‌ಮಿಷನ್‌ ಹಾಗೂ ಹಂಚಿಕೆಯ ಸಾಧ್ಯತೆಯನ್ನು ಪ್ರಕಟಿಸಿದ್ದರು. ಹಿಂಪಡೆದ ನೇಚರ್‌ ಚಿತ್ರವೂ, ಜೊತೆಗೆ ಮೊದಲ ಪ್ರಕಟಣೆಯೂ ಇಲ್ಲಿ ನೋಡಿ.

ಇದೊಂದು ತೀರಾ ನಾಚಿಕೆಗೇಡಿನ ಸಂಗತಿಯಗಿದ್ದು ಅದರ ಸಹಸಂಶೋಧಕರು ಕೊಟ್ಟ ದೂರನ್ನು ಆದರಿಸಿ ನೇಚರ್‌ ಪತ್ರಿಕೆಯು ಪ್ರಕಟಣೆಯನ್ನು ಹಿಂಪಡೆದಿದೆ. ಸಾಲದಕ್ಕೆ ಪ್ರೊ. ರಂಗಾ ಡಿಯಾಸ್‌ ಅವರ ವಿಶ್ವವಿದ್ಯಾಲಯವು ಅವರನ್ನು ಮನೆಗೆ ಕಳಿಸುವ ತಯಾರಿ ಮಾಡುತ್ತಿದೆ. ಇದಕ್ಕಾಗಿ CPUS ವಿಷಾಧಿಸುತ್ತದೆ. ಆಗ ಕೂಡ ನೇಚರ್‌ ವರದಿಯನ್ನು ಆಧರಿಸಿಯೇ CPUS ತನ್ನ  ವೆಬ್‌ ಪುಟದಲ್ಲಿ ಪ್ರಕಸಿದ್ದ ಲೇಖನವನ್ನೂ ಹಿಂತೆಗೆದುಕೊಂಡಿದೆ. ಹಾಗಾಗಿ ಇನ್ನೂ ವಾತಾವರಣದ ಉಷ್ಣತೆಯಲ್ಲಿ Superconductivity ಎಂಬುದು ಸಂಶೋಧಕರ ಕನಸೇ ಆಗಿದೆ.

CPUS  ಈ ಸಂಶೋಧನೆಯ ವಿವರಗಳ ಬಗೆಗೆ ಕುತೂಹಲದಿಂದ ಹಿಂಬಾಲಿಸಿತ್ತು. ಹಾಗಾಗಿ ಕೂಡಲೇ ಇದರ ವಿವರಗಳೂ ಲಭ್ಯವಾದವು. ಏನಾದರೂ CPUS  ಕೂಡ ತನ್ನ ಓದುಗರಲ್ಲಿ ಕ್ಷಮೆಯಾಚಿಸುತ್ತದೆ.

ನಮಸ್ಕಾರ

ಡಾ. ಟಿ. ಎಸ್.‌ ಚನ್ನೇಶ್‌,

Leave a Reply