ನೊಬೆಲ್ ಸುದ್ದಿಯ ಎರಡನೆಯ ದಿನ ಈ ವರ್ಷ 2019ರ ನೊಬೆಲ್ ಬಹುಮಾನಗಳು ಪ್ರಕಟವಾಗತೊಡಗಿವೆ. ಇಂದು ಭೌತ ವಿಜ್ಞಾನದ ಪ್ರಶಸ್ತಿ ಪ್ರಕಟವಾಗಿದೆ.
ಭೌತಶಾಸ್ತ್ರದ 2019 ರ ನೊಬೆಲ್ ಪ್ರಶಸ್ತಿಯನ್ನು “ಬ್ರಹ್ಮಾಂಡದ ವಿಕಸನ ಮತ್ತು ಬ್ರಹ್ಮಾಂಡದಲ್ಲಿ ಭೂಮಿಯ ಸ್ಥಾನದ ಬಗ್ಗೆ ನಮ್ಮ ತಿಳುವಳಿಕೆಗೆ ನೀಡಿದ ಕೊಡುಗೆಗಳಿಗಾಗಿ” ಮೂವರು ವಿಜ್ಞಾನಿಗಳಿಗೆ ನೀಡಲಾಗಿದೆ. ಅರ್ಧದಷ್ಟನ್ನು ಜೇಮ್ಸ್ ಪೀಬಲ್ಸ್ ಅವರಿಗೆ “ಭೌತಿಕ ವಿಶ್ವವಿಜ್ಞಾನದಲ್ಲಿ ಸೈದ್ಧಾಂತಿಕ ಆವಿಷ್ಕಾರಗಳಿಗಾಗಿ” ಮತ್ತು ಉಳಿದ ಅರ್ಧ ಭಾಗವನ್ನು ಜಂಟಿಯಾಗಿ ಮೈಕೆಲ್ ಮೇಯರ್‌ಗೆ ಮತ್ತು ಡಿಡಿಯರ್ ಕ್ವೆಲೋಜ್ ಅವರಿಗೆ “ಸೌರ-ಮಾದರಿಯ ನಕ್ಷತ್ರವನ್ನು ಪರಿಭ್ರಮಿಸುವ ಎಕ್ಸೋಪ್ಲಾನೆಟ್ ನ ಆವಿಷ್ಕಾರಕ್ಕಾಗಿ.” ನೀಡಲಾಗಿದೆ.
ಪ್ರೊ ಜೇಮ್ಸ್ ಪೀಬಲ್ಸ್ ಅವರು ಪ್ರಿನ್ಸ್ ಟನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಪ್ರೊ ಮೈಕೆಲ್ ಮೇಯರ್ ಅವರು ಸ್ವಿಜರ್ ಲ್ಯಾಂಡ್ ನ ಜಿನೇವಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಪ್ರೊ ಡಿಡಿಯರ್ ಕ್ವೆಲೋಜ್ ಅವರು ಸಹಾ ಜಿನೇವಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ ಜೊತೆಗೆ ಯುಕೆ ಯ ಕೆಂಬ್ರಜ್ ವಿಶ್ವವಿದ್ಯಾಲಯದಲ್ಲಿಯೂ ಪ್ರಾಧ್ಯಾಪಕರಾಗಿದ್ದಾರೆ.
ಇಂದು ಪ್ರಕಟವಾದ ಭೌತ ವಿಜ್ಞಾನ ನೊಬೆಲ್ ಪುರಸ್ಕಾರಕ್ಕೆ ಭಾಜನವಾದ ಸಂಶೋಧನೆಯ ವೈಜ್ಞಾನಿಕ ವಿವರಗಳ ನಿರೂಪಗಳನ್ನು ನಾಳೆ ಮುಂಜಾನೆಯ ಶುಭೋದಯದೊಡನೆ ನಿಮ್ಮದೇ ಭಾಷೆಯಲ್ಲಿ ಓದಬಹುದು. Centre for Public Understanding of Science ತನ್ನ ವೆಬ್ ಪುಟದಲ್ಲಿ (http://cfpus.org) ವಿವರವಾದ ಸಂಕಥನವನ್ನು ಮತ್ತು ಅದರಿಂದ ಮಾನವಕುಲವು ಅನುಭವಿಸುವ ಒಳಿತನ್ನು ಪ್ರಕಟಿಸಲಿದೆ.
ನಾಳೆ ನಿಮ್ಮ ಲೇಖನ ಓದಲು ಕುತೂಹಲದಿಂದ ಎದುರು ನೋಡುವೆ
ನಾಳೆ ನಿಮ್ಮ ಲೇಖನ ಓದಲು ಕುತೂಹಲದಿಂದ ಎದುರು ನೋಡುವೆ. ಅಭಿನಂದನೆಗಳು ಸರ್