You are currently viewing ವೈದ್ಯಕೀಯ ಅಥವಾ ಶರೀರಕ್ರಿಯಾ ವಿಜ್ಞಾನದ ನೊಬೆಲ್ -2019

ವೈದ್ಯಕೀಯ ಅಥವಾ ಶರೀರಕ್ರಿಯಾ ವಿಜ್ಞಾನದ ನೊಬೆಲ್ -2019

ಈ ವರ್ಷ 2019ರ ನೊಬೆಲ್‍ ಬಹುಮಾನಗಳು ಪ್ರಕಟವಾಗತೊಡಗಿವೆ. ಇಂದು ವೈದ್ಯಕೀಯ ಅಥವಾ ಶರೀರಕ್ರಿಯಾ ವಿಜ್ಞಾನದ ಪ್ರಶಸ್ತಿ ಪ್ರಕಟವಾಗಿದೆ.

ಈ ವರ್ಷದ ವೈದ್ಯಕೀಯ ಪ್ರಶಸ್ತಿಯನ್ನು ಅಮೆರಿಕ (2)ಮತ್ತು ಬ್ರಿಟನ್(1) ದೇಶದ ಮೂವರು ವಿಜ್ಞಾನಿಗಳು ಹಂಚಿಕೊಂಡಿದ್ದಾರೆ. ವೈದ್ಯಕೀಯ ವಿಜ್ಞಾನದ  ಅನುಶೋಧಕ್ಕಾಗಿ ಇವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರೊ ವಿಲಿಯಂ ಕೇಲಿನ್‍, ಪ್ರೊ ಸರ್. ಪೀಟರ್‍ ಜೆ. ರಾಟ್‍ ಕ್ಲಿಫ್‍   ಮತ್ತು ಪ್ರೊ  ಗ್ರೆಗ್‍ ಸೆಮೆಂಜಾ ಆ ಮೂವರು ಜೀವಿಕೋಶವು ಆಕ್ಸಿಜನ್‍ ಅನ್ನು ಗ್ರಹಿಸಿ ಹೇಗೆ ಜೀವಿಯ ಬದುಕಿಗೆ ವರ್ಗಾಯಿಸುತ್ತದೆ ಎಂಬ ಸಂಶೋಧನೆಗಾಗಿ ವೈದ್ಯಕೀಯ ವಿಭಾಗದಲ್ಲಿ ನೊಬೆಲ್‍ ಗಳಿಸಿದ್ದಾರೆ.

ಪ್ರೊ ವಿಲಿಯಂ ಕೇಲಿನ್‍ ಅವರು  ಜಾನ್‍ ಹಾಪ್‍ ಕಿನ್ಸ್‍ ವಿಶ್ವವಿದ್ಯಾಲಯದಲ್ಲಿ  ವಿಜ್ಞಾನ ಪ್ರಾಧ್ಯಾಪಕರಾಗಿದ್ದಾರೆ. ಪ್ರೊ ಸರ್. ಪೀಟರ್‍ ಜೆ. ರಾಟ್‍ ಕ್ಲಿಫ್‍  ಅವರು   ಆಕ್ಸ್ ಫರ್ಡ್‍ ವಿಶ್ವವಿದ್ಯಾಲಯದಲ್ಲಿ  ಪ್ರಾಧ್ಯಾಪಕರಾಗಿದ್ದಾರೆ. ಪ್ರೊ  ಗ್ರೆಗ್‍ ಸೆಮೆಂಜಾ ಅವರು ಹಾವರ್ಡ್‍ ವಿಶ್ವವಿದ್ಯಾಲಯದಲ್ಲಿ  ಪ್ರಾಧ್ಯಾಪಕರಾಗಿದ್ದಾರೆ.

ಇಂದು ಪ್ರಕಟವಾದ ವೈದ್ಯಕೀಯ ವಿಜ್ಞಾನ ನೊಬೆಲ್‍ ಪುರಸ್ಕಾರಕ್ಕೆ ಭಾಜನವಾದ ಸಂಶೋಧನೆಯ ವೈಜ್ಞಾನಿಕ ವಿವರಗಳ ನಿರೂಪಗಳನ್ನು ನಾಳೆ ಮುಂಜಾನೆಯ ಶುಭೋದಯದೊಡನೆ ನಿಮ್ಮದೇ ಭಾಷೆಯಲ್ಲಿ ಓದಬಹುದು. Centre for Public Understanding of Science ತನ್ನ ವೆಬ್‍ ಪುಟದಲ್ಲಿ (http://cfpus.org) ವಿವರವಾದ ಸಂಕಥನವನ್ನು ಮತ್ತು ಅದರಿಂದ ಮಾನವಕುಲವು ಅನುಭವಿಸುವ ಒಳಿತನ್ನು ಪ್ರಕಟಿಸಲಿದೆ.  

This Post Has 3 Comments

  1. PUTTARAJU P

    Thanks for the post on FB. I was outside. I missed the live from Sweden Thanks Again.

  2. Dr. Sharan Angadi

    Very good initiative in initiating interest. Looking forward to the details

  3. ಕೃಷ್ಣ ಮೂರ್ತಿ

    ಬಹಳ ಸಂತೋಷ, ಓದಲು ತವಕ ಕಾತುರದಿಂದ ಕಾಯುತ್ತಿರುವೆ

Leave a Reply