ಅಯ್ಯೋ ನಾವು ವ್ಯಾಕ್ಸೀನ್ ಹಾಕಿಸಿಕೊಂಡಿದ್ದೇವೆ…ನಾವು ಹೇಗಾದರೂ ಓಡಾಡಿಕೊಂಡು ಇರಬಹುದು. ಉಹೂಂ.. ಹಾಗನ್ನುವಂತಿಲ್ಲ. ಆ ತೀರ್ಮಾನ ಸದ್ಯಕ್ಕಂತೂ ಸಾಧುವಲ್ಲ! ಅರೇ.. ಮತ್ತೇನು? ಹೌದು. ವೈರಸ್ಸುಗಳ ಸಂಪೂರ್ಣ ನಿಯಂತ್ರಣದಲ್ಲಿ ಅನೇಕ ಪದರಗಳ ತಡೆಯಿದ್ದರೆ ಮಾತ್ರವೇ ಸಾಧ್ಯ! ಹಾಗೆಂದು ಆಸ್ಟ್ರೇಲಿಯಾದ ವೈರಾಣು ತಜ್ಞ ಪ್ರೊ. ಐಯಾನ್ ಮ್ಯಾಕೇ (Prof. Ian M. Mackay) ಅವರ ಸ್ಪಷ್ಟ ನುಡಿ. ಪ್ರೊ. ಐಯಾನ್, ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾಲಯದ ವೈದ್ಯಕೀಯ ವಿಭಾಗದ ಪ್ರೊಫೆಸರ್. ವೈರಸ್ಸಿನ ನಿಯಂತ್ರಣದಲ್ಲಿ ಅವರ ಅನುಶೋಧವಾದ ವಿವಿಧ ಪದರಗಳ-ಸ್ವಿಸ್ ಚೀಜ್(Swiss Cheese Model) ನಿಯಂತ್ರಣ ಮಾತ್ರವೇ ಸಂಪೂರ್ಣ ಸುರಕ್ಷತೆಯನ್ನು ಕೊಡಲು ಸಾಧ್ಯ.
ಪ್ರೊ. ಐಯಾನ್ ವಿಶ್ವವಿದ್ಯಾಲಯದ ಬೋಧನೆ, ಸಂಶೋಧನೆಯ ಜೊತೆಗೆ ರಾಯಲ್ ಮಕ್ಕಳ ಆಸ್ಪತ್ರೆಯ ವೈರಾಣು ತಜ್ಞರಾಗಿ ಜೊತೆಗೆ ಇದೀಗ ಆಸ್ಟ್ರೇಲಿಯಾದ ವೈರಸ್ಸಿನ ಸಾರ್ವಜನಿಕ ಸೋಂಕು ನಿಗಾವಣೆಯ ಮುಂದಾಳತ್ವ ವಹಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಈ ಮಾಡೆಲ್ ಈಗಾಗಲೇ ವೈರಸ್ಸಿನ ನಿಯಂತ್ರಣದಲ್ಲಿ ಜಾಗತಿಕವಾಗಿ ಚರ್ಚೆಯಲ್ಲಿದ್ದು, ಬಹುವಾಗಿ ಬಳಕೆಯಲ್ಲಿದೆ. ಇದೊಂದು ಸರಳವಾದ ವಿವರಣೆಯನ್ನು ಹೊಂದಿದ್ದು, 12 ಚಿತ್ರಗಳ ಮೂಲಕ ಸಾರ್ವಜನಿಕ ತಿಳಿವಳಿಕೆಗಾಗಿ ಬಿಬಿಸಿಯು ಅಣಿಗೊಳಿಸಿದ್ದನ್ನು ನಮ್ಮ ಕನ್ನಡದ ಓದುಗರಿಗೆ CPUS ರೂಪಿಸಿ ಕೊಟ್ಟಿದೆ. ಹಾಗಾದರೆ ಏನಿದು?
ಈ ಪದ್ಧತಿಯು ತುಂಬಾ ಸರಳವಾಗಿದೆ. ಅನೇಕ ಪದರಗಳ ತಡೆಯು ಮಾತ್ರವೇ ವೈರಸ್ಸನಿಂದ 100% ಸುರಕ್ಷತೆ ಕೊಡಬಲ್ಲದು ಎಂಬುದು ಅದರ ಸಾರ. ಉದಾಹರಣೆಗೆ ಪ್ರತೀ ಪದರವೂ ಸಣ್ಣ-ಪುಟ್ಟ ದೋಷಗಳನ್ನು ಹೊಂದಿದ್ದು, ಅದರ ಮೂಲಕ ವೈರಸ್ಸು ನುಸುಳಬಲ್ಲದು, ಹಾಗಾಗಿ ಬಹು-ಪದರಗಳ ರಕ್ಷಣೆ ಕೊಡಿ ಎನ್ನುತ್ತದೆ, ಸ್ವಿಸ್ ಚೀಜ್ ಮಾಡೆಲ್. ಹೆಚ್ಚು ಚಳಿಯಾದರೆ ಎರಡು ರಗ್ಗುಗಳನ್ನೋ, ಕಂಬಳಿಗಳನ್ನೋ ಹೊದ್ದುಕೊಳ್ಳುವುದಿಲ್ಲವೇ? ಒಂದು ಚಳಿ ತಡೆಯಲು ಆಗದಿದ್ದರೆ, ಮತ್ತೊಂದು.. ಹೀಗೆ. ವೆಂಟಿಲೇಶನ್ ಯಿಂದ ವ್ಯಾಕ್ಸೀನ್‌ವರೆಗೂ ಬಗೆ ಬಗೆಯ ಸಂರಕ್ಷಣಾ ಪದರಗಳನ್ನು ಬಳಸಿ ಪ್ರತಿಯೊಂದರಲ್ಲೂ ಇರಬಲ್ಲ ಸಣ್ಣ-ಪುಟ್ಟ ದೋಷ ನಿವಾರಿಸಕೊಂಡು ಸಂಪೂರ್ಣ ವೈರಸ್ಸಿನ ಸೋಂಕಿನಿಂದ ಪಾರಾಗಿ.. ಹಾಂ ಹಾಗಾದರೆ… ಮುಂದೇ ನೋಡೋಣ.
ವ್ಯಾಕ್ಸೀನು.
ಪರೀಕ್ಷೆಗೆ ಒಳಪಡುವಿಕೆ
ಸೋಂಕಿತರ ಪತ್ತೆ ಹಚ್ಚುವುದು
ಪ್ರತ್ಯೇಕ ವಾಸ
ಮಾಸ್ಕ್ ಬಳಕೆ
ಸಾಮಾಜಿಕ ಅಂತರ
ಸುಮ್ಮನೆ ಸುತ್ತಾಟದ ನಿಯಂತ್ರಣ
ವೆಂಟಿಲೇಶನ್.. !
ಕೈ ತೊಳೆಯುವುದು..
ಏನು ಹಾಗಾದರೆ..
ನಮ್ಮ ಸುರಕ್ಷತೆ ನಮ್ಮದೇ ರೂಢಿಯಲ್ಲಿ..
ವ್ಯಾಕ್ಸೀನ್ ಮಾತ್ರವೇ ವೈರಸ್ಸಿನ ನಿಯಂತ್ರಿಸಲು ಸಾಲದು ಹಾಗಾದರೆ ಏನು ಮಾಡಬೇಕು ಎಂಬ ವಿಶ್ವಾಸಾರ್ಹವಾದ ಅನುಶೋಧವನ್ನು ಬಳಸಿ ಬಿಬಿಸಿಯ ಮೈಕೆಲ್ ರಾಬರ್ಟ್ ತಮ್ಮ ತಂಡದವರೊಂದಿಗೆ ಸಿದ್ಧಪಡಿಸಿದ ಚಿತ್ರಗಳ ಬಳಸಿ ಕನ್ನಡಿಗರಿಗೆ CPUS ಅಣಿಗೊಳಿಸಿದೆ. ರಾಜ್ಯದ ಜನತೆಯು ಕರೋನಾ ಮುಕ್ತರಾಗಲಿ ಎಂಬ ಹಾರೈಕೆಯೊಂದಿಗೆ. ಶೀಘ್ರವೇ ಮಾನವರೊಳಗೂ ಕೊರೊನಾ ಪ್ರತಿರೋಧದ ಜೀನುಗಳೇನಾದರೂ ಇವೆಯಾ? ಎಂಬ ಅತ್ಯಂತ ಆಸಕ್ತಿಯ ಲೇಖನವನ್ನು ಓದಲು ಕಾಯಿರಿ.
ಪ್ರೊ. ಐಯಾನ್ ಮ್ಯಾಕೇ ಅವರಿಗೆ ಬಿಬಿಸಿಯ ಮೈಕೆಲ್ ರಾಬರ್ಟ್ ಮತ್ತು ಅವರ ತಂಡಕ್ಕೆ ಕನ್ನಡಿಗರ ಪರವಾಗಿ ವಂದನೆಗಳು
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
ವಾವ್ ಚೆನ್ನೇಶ್ ರಾತ್ರಿ ನಾಲ್ಕು ಗಂಟೆಯ ತನಕ ಕುಳಿತು ತಯಾರಿಸಿದ ಲೇಖನ ನಿಜವಾಗಿಯೂ ಸಮಾಜದ ಕಣ್ಣು ತೆರೆಯಲು ದಾರಿ ತೋರುವಂತಿದೆ. ಬಹಳಷ್ಟು ಕೋವಿಡ್ ಮಾಹಿತಿ ಇರುವ ಈ ಲೇಖನದಲ್ಲಿ ವ್ಯಾಕ್ಸೀನ್ ಬಗ್ಗೆ ಜನರ ಭರವಸೆ ಎಷ್ಟಿರಬೇಕು ಎಂಬುದನ್ನು ತೋರಿಸುತ್ತದೆ. ಜಾಗೃತೆ ವಹಿಸುವುದು ಎಷ್ಟು ಸೂಕ್ತ ಎಂಬುದರ ವಿವರಣೆ, ಹಾಗೂ ಪದರಗಳ ಸುರಕ್ಷತೆ ಬಗ್ಗೆ ನೀಡಿದ ವಿವರಣೆಗೆ ಧನ್ಯವಾದಗಳು. ಅಭಿನಂದನೆಗಳು 💐💐
ಉಪಯುಕ್ತ ಮಾಹಿತಿ
ಸೊಗಸಾಗಿದೆ, ಸರ್. ಹಂಚುವೆ.