“ಹೊಸತನವನ್ನೊಳಗೊಂಡ ಆರ್ಥಿಕ ಬೆಳವಣಿಗೆಯ ವಿವರಣೆ”ಗೆ ಆಲ್ಫ್ರೆಡ್ ನೊಬೆಲ್ ಸ್ಮರಣೆಯ 2025ರ ಅರ್ಥವಿಜ್ಞಾನದ ಪ್ರಶಸ್ತಿ
ಕಳೆದ ಶತಮಾನಗಳಲ್ಲಿ, ಇತಿಹಾಸದಲ್ಲಿ ಮೊದಲ ಬಾರಿಗೆ, ಜಗತ್ತು ನಿರಂತರವಾದ ಆರ್ಥಿಕ ಬೆಳವಣಿಗೆಯನ್ನು ಕಂಡಿದೆ. ಇದು ಅಪಾರ ಸಂಖ್ಯೆಯ ಜನರನ್ನು ಬಡತನದಿಂದ ಹೊರತಂದಿದೆ ಮತ್ತು ನಮ್ಮ ಸಮೃದ್ಧಿಗೆ ಅಡಿಪಾಯ ಹಾಕಿದೆ. ಇದರ ಅಡಿಪಾಯವು ತಾಂತ್ರಿಕ ನಾವೀನ್ಯತೆಯ ಅಥವಾ ತಂತ್ರಜ್ಞಾನದ ಹೊಸತನದ ನಿರಂತರವಾದ ಹರಿವು…
