You are currently viewing ಸಸ್ಯಯಾನದ ಎರಡನೆಯ ಭಾಗ  “ಮಾನವತೆಯ ಸಾಂಗತ್ಯದ ಸಸ್ಯಯಾನ” ಪುಸ್ತಕ

ಸಸ್ಯಯಾನದ ಎರಡನೆಯ ಭಾಗ “ಮಾನವತೆಯ ಸಾಂಗತ್ಯದ ಸಸ್ಯಯಾನ” ಪುಸ್ತಕ

ಸಸ್ಯಯಾನದ ಎರಡನೆಯ ಭಾಗವು “ಮಾನವತೆಯ ಸಾಂಗತ್ಯದ ಸಸ್ಯಯಾನ”ವಾಗಿ ಪುಸ್ತಕ ರೂಪದಲ್ಲಿ ಹೊರ ಬಂದಿದೆ. ಅಮೃತಬಿಂದುವಿಗೆ ಸಿಕ್ಕ ಪ್ರೊತ್ಸಾಹವು ಇದನ್ನೂ ಬಣ್ಣದಲ್ಲಿ ಮುದ್ರಿಸಲು ಪ್ರೇರೇಪಿಸಿದೆ. ಯಥಾಪ್ರಕಾರ ಮತ್ತದೇ ಗಿಡ-ಮರಗಳ ಪ್ರೀತಿಯು ಉಣ್ಣುವ ತುತ್ತಿನಿಂದ ಆರಂಭಗೊಂಡು, ಮಸಾಲೆಗಳ ಪರಿಮಳದಿಂದ, ಗುಲಾಬಿ -ಸೇವಂತಿಗೆಗಳ ಶೃಂಗಾರದ ಜೊತೆಗೆ ಆಧ್ಯಾತ್ಮದ ಕ್ಷಣಗಳನ್ನೂ ಆವರಿಸಿದ ಸಸ್ಯಗಳನ್ನು ಒಳಗೊಂಡು ಕಡೆಗೆ ಸ್ಮಶಾನಯಾತ್ರೆಗೂ ಜೊತೆಯಾದ ಗಿಡದ ಕಥನವನ್ನೂ ಹೊತ್ತು ನಿಮ್ಮ ಮುಂದೆ ಬಂದಿದೆ. ವೈಯಕ್ತಿಕವಾಗಿ ಈ ಪುಸ್ತಕ ನನಗೆ ನನ್ನ ಜೀವನದ ಅತ್ಯಂತ ದುಃಖವನ್ನೂ ದಾಖಲು ಮಾಡಿದ ಪುಟವನ್ನು ಒಳಗೊಂಡಿದೆ. ಕಳೆದ ವರ್ಷದ ಕರೋನದ ದೀರ್ಘವಾದ ಅಸ್ತ-ವ್ಯಸ್ತ ಜೀವನನಿಂದ ಈಗಷ್ಟೆ ಹೊರಬರುತ್ತಿರುವ ಸಂದರ್ಭದಲ್ಲಿ ೨೮ ಗಿಡ-ಮರಗಳ ವೈವಿಧ್ಯಮಯ ಕಥನಗಳನ್ನು ಅಣಿಮಾಡಿ ನಿಮ್ಮ ಮುಂದೆ ಇಟ್ಟಿದ್ದೇವೆ. ಮತ್ತದೇ ಪ್ರೀತಿಯಿಂದ ನಮ್ಮ ಪ್ರಯತ್ನವನ್ನು ಬೆಂಬಲಿಸಿ. ಮುದ್ರಣ ವೆಚ್ಚ ಹೆಚ್ಚಾದ ಕಾರಣದಿಂದ ಆರು ನೂರು ರೂಪಾಯಿಗಳಾಗಿದೆ. ಆದರೂ ನಮ್ಮ ಎಲ್ಲಾ ಸಸ್ಯಯಾನದ ಸಹಪಯಣಿಗರಿಗೆ 500 ರೂಪಾಯಿಗಳಿಗೆ ತಲುಪಿಸುವ ನಿರ್ಧಾರ ಮಾಡಿದ್ದೇವೆ. ಕಳೆದ ಬಾರಿಯ ಹಾಗೆ ಈಗಲೂ ಎರಡು ಪ್ರತಿಯನ್ನು ಕೊಂಡು, ನಿಮ್ಮ ಗೆಳೆಯ/ಗೆಳತಿಯರಿಗೆ ಗಿಫ್ಟ್‌ ಕೊಟ್ಟು ನಿಮ್ಮಲ್ಲೊಂದಿಟ್ಟು ಬೆಂಬಲಿಸಿ.

      ನಮ್ಮ ತಟ್ಟೆಯನ್ನು ತಲುಪುವ ಹತ್ತಾರು ಕಾಳು-ಬೇಳೆಗಳ ಕಥನಗಳು ಇಲ್ಲಿವೆ. ಹೂವು-ಹಣ್ಣುಗಳೂ ತಮ್ಮ ಕಥೆಗಳನ್ನು ತುಂಬಿಕೊಟ್ಟಿವೆ. ಮನೆ-ಮದ್ದಿನ ತಿಳಿವಲ್ಲದೆ, ಪರಿಮಳದ ಸಾಂಬಾರು ಸಸ್ಯಗಳೂ ಜೊತೆಯಾಗಿವೆ. ಹಲವು ವಿದ್ವಾಂಸ ಮಿತ್ರರ ಆಶಯದಂತೆ ಪ್ರತೀ ಕಥನಗಳೂ ಸಾಕಷ್ಟು ಹೆಚ್ಚಿನ ಓದಿನ ಮೂಲಗಳನ್ನೂ ಒಳಗೊಂಡು ತಮ್ಮನ್ನು ಪ್ರೇರೇಪಿಸಲಿವೆ. ಪುಸ್ತಕವು ಒಳಗೊಂಡ ಎಲ್ಲ ಕಥನಗಳು ಹೀಗಿವೆ.

ಆಯ್ದ ಕೆಲವೊಂದು ಪುಟಗಳು ನಿಮ್ಮ ಕುತೂಹಲಕ್ಕೆ ತೆರೆದುಕೊಂಡಿವೆ.

ಕಾಫಿ ಟೇಬಲ್ ಪುಸ್ತಕ ಮಾದರಿಯಲ್ಲಿ ಬಣ್ಣದಲ್ಲಿ ಪ್ರಕಟಿಸಲಾಗಿರುವ ಒಟ್ಟು 180 ಪುಟಗಳ ಪುಸ್ತಕದ ಮೂಲ ಬೆಲೆಯಲ್ಲಿ ಒಂದು ನೂರು ರಿಯಾಯಿತಿಯಲ್ಲಿ 500 ರುಪಾಯಿಗೆ ಪಡೆಯಿರಿ. ಸಸ್ಯಯಾನದ ಪಯಣಿಗರು ಒಂದು ಸಾವಿರ ರುಪಾಯಿಗಳನ್ನು CPUS ಖಾತೆಗೆ ಕಳಿಸಿ. ಸಸ್ಯಯಾನದ ಓದುಗರಿಗೆ Speed Post/ ಪೋಸ್ಟ್‌ ಪಾರ್ಸೆಲ್‌ ನಲ್ಲಿ ತಲುಪಲಿದೆ.   CPUS ಸಂಸ್ಥೆಯನ್ನು ಬೆಳೆಸಲು ನೀವು ಮಾಡುವ ಸಹಾಯ.  ಹಣ ಕಳಿಸಿ 94482 68548 ಗೆ ನಿಮ್ಮ ವಿಳಾಸ ವಾಟ್ಸಾಪು ಮಾಡಿ.  

CPUS ಬ್ಯಾಂಕ್ಖಾತೆ ವಿವರ :
Name : Centre for Public Understanding of Science, Bengaluru
Ac No. : 843610110014043
IFSC Code : BKID0008436
Bank of India, Sahakara Nagar Branch Bengaluru

ನಮಸ್ಕಾರ

ಡಾ.ಟಿ.ಎಸ್.‌ ಚನ್ನೇಶ್.

Leave a Reply