You are currently viewing “ಪಾಲ್‌ ಡೆ ಕ್ರೈಫ್‌” ಅವರ “ಮೈಕ್ರೊಬ್‌ ಹಂಟರ್ಸ್‌” – (Microbe Hunters)

“ಪಾಲ್‌ ಡೆ ಕ್ರೈಫ್‌” ಅವರ “ಮೈಕ್ರೊಬ್‌ ಹಂಟರ್ಸ್‌” – (Microbe Hunters)

ಹೆಚ್ಚೂ ಕಡಿಮೆ ಒಂದು ಶತಮಾನದಷ್ಟು ಹಿಂದೆ ಪ್ರಕಟವಾದ ಪಾಲ್‌ ಡೆ ಕ್ರೈಫ್‌ (Paul de Kruif) ಅವರ ಮೈಕ್ರೊಬ್‌ ಹಂಟರ್ಸ್‌ (Microbe Hunters) ಅನ್ನು ಇಂದಿನ ಪುಸ್ತಕಯಾನದಲ್ಲಿ ಪರಿಚಯಿಸುತ್ತಿದ್ದೇನೆ. ಇದೇನಿದು ಒಂದು ಶತಮಾನದ ಹಿಂದಿನ ಪುಸ್ತಕದ ಓದಿನ ತುರ್ತು ಏನಿದ್ದೀತು? ಎನ್ನಿಸಿದರೆ ಅಚ್ಚರಿಯೇನಲ್ಲ. ನಿಜ, ಇಂದು ಬಹುಪಾಲು ವಿಜ್ಞಾನದ ವಿದ್ಯಾರ್ಥಿಗಳ ಬಹು ದೊಡ್ಡ ಆಸೆ ವೈದ್ಯಕೀಯ ಪದವಿ ಗಳಿಸಿ ವೈದ್ಯರಾಗುವುದು. ಪ್ರಸ್ತುತ ಉಕ್ರೇನ್‌ ಗೆ ಹೋಗಿದ್ದ ಸಾವಿರಾರು ವಿದ್ಯಾರ್ಥಿಗಳ ಮಹತ್ವಾಕಾಂಕ್ಷೆಯೇ ಅದಾಗಿದ್ದ ಬಗ್ಗೆ ಸಾಕಷ್ಟು ಸುದ್ದಿಯನ್ನು ಓದಿರುತ್ತೀರಿ, ಕೇಳಿರುತ್ತೀರಿ. ಎಲ್ಲಾ ವೈದ್ಯಕೀಯ ವಿಜ್ಞಾನದ ಆಸಕ್ತಿಯ ವಿದ್ಯಾರ್ಥಿಗಳು ಓದಲೇ ಬೇಕಾದ ವಿಶಿಷ್ಟ ಪುಸ್ತಕವಿದು. ಕೇವಲ 12 ಪ್ರಬಂಧಗಳಿರುವ ಇಡೀ ಮೈಕ್ರೊಬಯಾಲಜಿಯ – ಸೂಕ್ಷ್ಮಾಣು ಜೀವಿ ವಿಜ್ಞಾನದ ಅಗತ್ಯ ಪೂರ್ಣವಾದ ವಿಚಾರಗಳನ್ನು ತುಂಬಾ ಆಸಕ್ತಿದಾಯಕವಾಗಿ ಪರಿಚಯಿಸುವ ಪುಸ್ತಕ. ಆ ಮೂಲಕ ಇಡೀ ಮಾನವ ದೇಹದ ನಿರ್ವಹಣೆಯಲ್ಲಿ, ಅಷ್ಟೇಕೆ ಜೀವಿ ಪ್ರಪಂಚದ ನಿರ್ವಹಣೆಯಲ್ಲಿ ಅವುಗಳ ಪಾತ್ರದ ಬಹು ಅರ್ಥಪೂರ್ಣ ವಿವರಣೆ ದಕ್ಕುವುದಷ್ಟೇ ಅಲ್ಲ, ನಮ್ಮ ಗ್ರಹಿಕೆಯ ಭಾಗವಾಗುವುದು ಖಂಡಿತಾ.

ಪುಸ್ತಕದ ಮೊದಲ ಅಧ್ಯಾಯದ ಆರಂಭವೇ ಹೀಗಿದೆ. Two hundred and fifty years ago an obscure man named Leeuwenhoek looked for the first time into a mysterious new world peopled with a thousand different kinds of tiny beings, some ferocious and deadly, others friendly and useful, many of them more important to mankind than any continent or archipelago.

Leeuwenhoek, unsung and scarce remembered, is now almost as unknown as his strange little animals and plants were at the time he discovered them. This is the story of Leeuwenhoek, the first of the microbe hunters.    

ಪುಸ್ತಕದ ಮೊದಲ ಪ್ರಕಟಣೆಯಾದದ್ದು 1926ರಲ್ಲಿ – ಅಲ್ಲಿಗೂ 250 ವರ್ಷಗಳ ಹಿಂದಿನ ( Two hundred and fifty years ago ) -ಅಂದರೆ ಈಗ್ಗೇ ಸುಮಾರು 346 ವರ್ಷಗಳ ಹಿಂದಿನ.. ಸಂಗತಿಯಿಂದ ಕಥನವು ಆರಂಭವಾಗುತ್ತದೆ. ಅಷ್ಟು ಮೊದಲೇ ಸೂಕ್ಷ್ಮಾಣು ಜೀವಿಯ ಬೇಟೆಯು ಲ್ಯುವೆನ್‌ ಹುಕ್‌ ನಿಂದಾ ಆರಂಭವಾಗುತ್ತದೆ. ಲ್ಯುವೆನ್‌ ಹುಕ್‌ ಮೊಟ್ಟ ಮೊದಲು ಸೂಕ್ಷ್ಮಜೀವಿಗಳ ಪತ್ತೆ ಹಚ್ಚಿ ಸುದ್ದಿ ಮಾಡಿದ ವಿಜ್ಞಾನಿ. ಆಂಟೊನಿ ಲ್ಯುವೆನ್‌ ಹುಕ್‌ (Antony Leeuwenhoek) 1632 ರಲ್ಲಿ ಜನಿಸಿದ್ದ ವ್ಯಕ್ತಿ. ಆತನಿಗಿಂತಾ ಹಿಂದಿನ ಜೀವಿಗಳ ಸಂಭಂಧಗಳ ಸಂಗತಿಗಳು ಈಗ ನಂಬಿಕೆಗೆ ಬಾರದಷ್ಟು ಭಿನ್ನವಾಗಿದ್ದವು. ರೋಗ-ರುಜಿನಗಳ ತಿಳಿವಳಿಕೆಯೇ ವಿಚಿತ್ರವಾಗಿತ್ತು. ಎಲ್ಲವೂ ಮೂಢನಂಬಿಕೆಗಳ ಅಥವಾ ಮತ್ತಾವುದೋ ಪೈಶಾಚಿಕ ಹಿನ್ನೆಲೆಯ ಪುರಾಣಗಳ ವೈಭವದ ಸಂಕೇತಗಳಲ್ಲಿಯೂ ವಿವರಿಸಲಾಗುವ ಕಥನಗಳಾಗಿದ್ದವು. ಅವುಗಳಿಂದ ಹೊರ ಬರುವ ಮಹಾನ್‌ ಬದಲಾವಣೆಗಳ ಹರಿಕಾರರ ಈ ಕಥನಗಳು, ಎಂಥವರನ್ನೂ ಬೆಚ್ಚಿ ಬೀಳಿಸಬಲ್ಲವು.

ನಮ್ಮ-ನಿಮ್ಮಲ್ಲಿ ಕೆಲವರಿಗಾದರೂ ಜಿಮ್‌ ಕಾರ್ಬೆಟ್‌ – ಕೆನೆತ್‌ ಆಂಡರ್‌ ಸನ್‌ ಅವರ ಬರಹಗಳ ನೇರ ಪರಿಚಯವಿದ್ದೀತು! ಅಥವಾ ಅವುಗಳ ಕನ್ನಡದ ಅನುವಾದಗಳಲ್ಲಿ ರೋಚಕವಾಗಿಸಿದ ತೇಜಸ್ವಿ ಮುಂತಾದವರನ್ನಾದರೂ ಓದಿರುತ್ತೀರಿ! ಆದರೆ ಮೈಕ್ರೊಬ್‌ ಹಂಟರ್ಸ್‌ (Microbe Hunters) ಇವೆಲ್ಲಕ್ಕಿಂತಲೂ ಹೆಚ್ಚಿನ ರೋಮಾಂಚಕವಾದ ಓದು. ಜಿಮ್‌ ಕಾರ್ಬಟ್ಟರಲ್ಲಾಗಲಿ, ಕೆನೆತ್‌ ಆಂಡರ್‌ ಸನ್ನರಲ್ಲಾಗಲಿ ಬೇಟೆಯ ಹತಾರಗಳು, ಕೋವಿ-ಕತ್ತಿಗಳು ಎದುರಿಗೇ ಕಂಡಾವು! ಆದರೆ ಮೈಕ್ರೊಬ್‌ ಹಂಟರ್ಸ್‌ ಅಲ್ಲಿ, ಸೂಕ್ಷ್ಮಜೀವಿಗಳ ಬೇಟೆಯ ಆಯುಧಗಳು ಕಾಸು-ಪೈಸೆಯಂತಹಾ ಚಿಲ್ಲರೆ ನಾಣ್ಯದ ಸೈಜಿನ ಮಸೂರಗಳು ಮಾತ್ರ! ಕಾಣುವುದೇನು? ಕೈ ಜಾರಿದರೆ ಬಿದ್ದು ಒಡೆದೇ ಹೋಗುವ ಸೂಕ್ಷ್ಮತೆಯ ಹಿನ್ನೆಲೆಯವು. ಆದರೇನಂತೆ ಅಷ್ಟೊಂದು ಸೂಕ್ಷ್ಮವಾದ ಆಯುದಗಳಲ್ಲಿ ಶಿಕಾರಿಯ ಹುಡುಕಾಟದ ರೋಚಕತೆಯು ಮತ್ತೂ ವಿಶಿಷ್ಟವಾದದ್ದು. ಇವುಗಳೇ ಇಲ್ಲಿನ ವಸ್ತುಗಳು.

It would be great fun to look through a lens and see things bigger than your naked eye showed them to you! But.. ಹೀಗೆ ಕಾಣದ್ದನ್ನು ಹಿರಿದಾಗಿಸಿ ತೋರಬಲ್ಲ ಚತುರತೆಯನ್ನು ನಂಬಿಸುವುದಾದರೂ ಹೇಗೆ? ಅದೊಂದು ರೋಮಾಂಚಕ ಸಂಗತಿ. ರೋಚಕತೆಯ ಪರಮಾವಧಿ! ಹಾಗಾಗಿ ಯಾವ ಕಾಡಿನ ಕಥೆಗಳಿಗಿಂತಲೂ ಕಾಣದ ಕೈಚಳಕದ ಕಥನಗಳು ಇಡೀ ಮನುಕುಲವನ್ನು ಹಿಡಿದಿಟ್ಟ, ಕಾಪಾಡಿದ, ಕೈಗಾರಿಕೆಗಳ ಬೆಳೆಸಿದ ವಿಭಿನ್ನ ವಿಚಾರಗಳು ತೆರೆದುಕೊಳ್ಳುವ ಆನಂದವನ್ನು ಇಲ್ಲಿನ ಹನ್ನೆರಡೂ ಪ್ರಬಂಧಗಳು ಎಳೆ-ಎಳೆಯಾಗಿ ಬಿಡಿಸಿಕೊಡುತ್ತವೆ.

ಆ ಸಂದರ್ಭದ ಸೂಕ್ಷ್ಮಜೀವಿಗಳ ವಿವರಣೆಗಳು ಇಂಗ್ಲಂಡಿನ ಕಾಲೇಜುಗಳಲ್ಲಿ ನಡೆಯುತ್ತಿದ್ದನ್ನು ಹೇಳುವ ಪರಿ ಹೇಗೆಂದರೆ..  

The college crowded around under the light of high candles. Silence, then the hushed experiment, and here is their report of it:

“A circle was made with the powder of unicorn’s horn and a spider set in the middle of it, but it immediately ran out.” ……. Crude, you exclaim. Of course! But remember that one of the members of this college was Robert Boyle, founder of the science of chemistry, and another was Isaac Newton.

ಮೊಟ್ಟ ಮೊದಲ ಸೂಕ್ಷ್ಮ ದರ್ಶಕ

ಇಂತಹಾ ಮಹಾನ್‌ ವಿಜ್ಞಾನಿಗಳ ಎದುರಲ್ಲಿ ಕಾಣದ ಜಗತ್ತು ಅನಾವರಣವಾಗಬೇಕಿತ್ತು. ಇದೆಲ್ಲವೂ ಆದದ್ದಾದರೂ ಹೇಗೆ? ಬೇಟೆಯ ರೋಚಕ ಸಂಗತಿಗಳು ಕಾಣುವ ಕಾಡಿನ ಒಳಗಿನವಲ್ಲ! ಕಾಣದ ಸಂಕೇತಗಳಾಚೆಗಿನ ಸ್ವರಮೇಳಗಳು. ನ್ಯೂಟನ್‌, ರಾಬರ್ಟ್‌ ಬಾಯ್ಲ್‌ ಅಲ್ಲದೆ ಆಗಿನ ದೊರೆ ಎರಡನೆಯ ಚಾರ್ಲ್ಸ್‌ -ಕಾಲೇಜಿಗೆ ಸೇರಿದ ಕಾಲ. ಅಷ್ಟೇಕೆ ರಾಯಲ್‌ ಸೊಸೈಟಿಯ ಘಟಾನುಘಟಿಗಳು, ಇವರನ್ನೆಲ್ಲಾ ಕಾಣದ ಜಗತ್ತಿನ ಪರದೆಯನ್ನು ಪ್ರದರ್ಶಿಸುವ ಭವ್ಯವಾದ ಚಟುವಟಿಕೆಗಳ ವಿವರಗಳನ್ನು ಒಳಗೊಂಡ ಪುಸ್ತಕವಿದು.

ವಿಚಾರಣೆಗೆ ಒಳಪಡಿಸಿದ ರಾಯಲ್‌ ಸೊಸೈಟಿಗೆ ಲೆವೆನ್‌ ಹುಕ್‌ ಹೇಳಿದ್ದು, Those little animals were everywhere! ಸೂಕ್ಷ್ಮಜೀವಿಗಳನ್ನು ಕರೆದದ್ದು ಹಾಗೆ! He told the Royal Society of finding swarms of those sub-visible beings in his mouth—of all places:

“Although I am now fifty years old,” he said, “I have uncommonly well-preserved teeth, because it is my custom every morning to rub my teeth very hard with salt, and after cleaning my large teeth with a quill, to rub them vigorously with a cloth. . . .”     ಇಷ್ಟೇ ಅಲ್ಲ..! ಇಂತಹಾ ನೂರಾರು ವಿರಳ ವಿವರಗಳ ಸರಮಾಲೆಯನ್ನು ಸೂಕ್ಷಮಾತಿಸೂಕ್ಷ್ಮವಾಗಿ ಪೋಣಿಸಿ ಸುಂದರವಾಗಿ ಹೆಣೆದಿದ್ದಾರೆ ಪಾಲ್‌ ಕ್ರೈಫ್‌.

       ಪಾಲ್‌ ಕ್ರೈಫ್‌, ಡಚ್‌ ಮೂಲದ ಅಮೆರಿಕನ್‌ ಸೂಕ್ಷ್ಮಾಣುಜೀವಿ ತಜ್ಞ. ಅಮೆರಿಕದ ಮಿಚಿಗನ್‌ ರಾಜ್ಯದಲ್ಲಿ 1890ರ ಮಾರ್ಚ್‌ 2 ರಂದು ಜನಿಸಿದವರು. ಮಿಚಿಗನ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿ ಅಲ್ಲಿಯೇ ಡಾಕ್ಟೊರೇಟ್‌ ಪಡೆದವರು. ಸ್ವಲ್ಪ ಕಾಲ ಸೈನ್ಯದಲ್ಲೂ ಸೇವೆ ಸಲ್ಲಿಸಿದ ಪಾಲ್‌ ಆಗ ಫ್ರೆಂಚ್‌ ವಿಜ್ಞಾನಿಗಳ ಸಹವಾಸ ಪಡೆದವರು. ಮಿಚಿಗನ್‌ ವಿಶ್ವವಿದ್ಯಾಲಯವೂ ಸೇರಿದಂತೆ ರಾಕೆಫೆಲ್ಲರ್‌ ವೈದ್ಯಕೀಯ ಸಂಸ್ಥೆಯಲ್ಲೂ ( Rockefeller Institute for Medical Research ) ಸೇವೆ ಸಲ್ಲಿಸಿದವರು. ಮುಂದೆ ಪೂರ್ಣ ಪ್ರಮಾಣದ ವಿಜ್ಞಾನ ಬರಹಗಾರರಾಗಿ “ರೀಡರ್ಸ್‌ ಡೈಜೆಸ್ಟ್‌ (Readers Digest)” ಸೇರಿದಂತೆ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ವಿಜ್ಞಾನ ಮತ್ತು ವೈದ್ಯಕೀಯ ಕುರಿತಂತೆ ನಿರಂತರವಾಗಿ ಬರೆದವರು. Our Medicine Men, Men Against Death, Life Among the Doctors,  ಸೇರಿದಂತೆ ಹತ್ತಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಕಡೆಯ ಪುಸ್ತಕ. The Sweeping Wind ಅದು ಅವರ ಆತ್ಮಕಥನ. ಮುಂದೆ1971ಫೆಬ್ರವರಿ 28 ರಂದು (February 28, 1971) ತೀರಿಕೊಂಡರು.

ಪಾಲ್‌ ಕ್ರೈಫ್‌, ಶತಮಾನದಷ್ಟು ಹಿಂದೆಯೇ ವಿಜ್ಞಾನದ ಬರಹಗಾರರಾಗಿ ಸಂಚಲನ ಮೂಡಿಸಿದವರು. ಅವರ  ಮೊದಲ ಕೃತಿ Our Medicine Men, ಪ್ರಕಟವಾಗಿದ್ದೇ ನೂರು ವರ್ಷಗಳ ಹಿಂದೆ 1922ರಲ್ಲಿ! ರೀಡರ್‌ ಡೈಜೆಸ್ಟ್‌ ನಲ್ಲಿ 1945ರಲ್ಲಿ ಪ್ರಕಟವಾದ Meals for Millions Foundation and their Multi-Purpose Food. ಕುರಿತ ಇವರ  ಲೇಖನ “How We Can Help Feed Europe (Reader’s Digest, Sept. 1945 -p. 50-52)  ಜಾಗತಿಕವಾಗಿ ಮಹತ್ತರ ಸುದ್ದಿಯಾಗಿಸಿತ್ತು. ಪ್ರಸ್ತುತ ಮೈಕ್ರೊಬ್‌ ಹಂಟರ್ಸ್‌ ಸಹಾ ಅಷ್ಟೊತ್ತಿಗೆ ಮಹತ್ವದ ಹೆಸರು ತಂದು ಕೊಟ್ಟು ಎರಡು ದಶಕಗಳಾಗಿದ್ದವು.

ಮೈಕ್ರೊಬ್‌ ಹಂಟರ್ಸ್‌ (Microbe Hunters) ಪಾಲ್‌ ಅವರ ಮಹತ್ವದ ಕೃತಿ, ಅಷ್ಟೇ ಅಲ್ಲ ತೀರಾ ಇತ್ತೀಚೆಗೆ 1998ರಲ್ಲಿ Microbe Hunters revisited ಎಂಬುದಾಗಿ ಪ್ರೊ. ವಿಲಿಯಮ್ಸ್‌ ಸಮ್ಮರ್ಸ್‌ (William C. Summers, Yale University School of Medicine) ಅವರಿಂದ ಮರು ವಿಮರ್ಶೆಯ ಲೇಖನವು International Microbiology ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

ಈ ಪುಸ್ತಕವು ಈಗಾಗಲೇ ಹೇಳಿದಂತೆ ಕೇವಲ 12 ಪ್ರಬಂಧಗಳ ಸುಮಾರು 260 ಪುಟಗಳ ಪುಟ್ಟ ಪುಸ್ತಕ. ಸೂಕ್ಷ್ಮದರ್ಶಕದ ಆನ್ವೇಷಣೆಯ ಮೂಲಕ ಬೇಟೆಯು ಆರಂಭವಾಗಿ, ಅವುಗಳೂ ಸಹಾ ನಮ್ಮಂತೆ ಅಪ್ಪ- ಅಮ್ಮಂದಿರನ್ನೂ ಅಥವಾ ಪೋಷಕರನ್ನು ಹೊಂದಿರಲೇಬೇಕೆಂಬ ಮಹತ್ವದ ಶೋಧವನ್ನು ಮಾಡಿದ ವಿಜ್ಞಾನಿ ಸ್ಪಿಲಾಂಜನಿಯ (Spallanzani) ವಿವರಗಳಲ್ಲದೆ, ಲೂಯಿ ಪಾಶ್ಚರ್‌ ಹುಚ್ಚು ನಾಯಿ ಕುರಿತ ಅನ್ವೇಷಣೆಯಲ್ಲದೆ ಇತರೇ ಸೂಕ್ಷ್ಮಾಣುಜೀವಿಗಳ ಕಥನಗಳನ್ನೂ ಆತ್ಯಂತಿಕ ವಿವರಗಳಿಂದ ಒದಗಿಸುತ್ತದೆ. ಮಲೇರಿಯಾದ ಅನ್ವೇಷಣೆಯ ಜೊತೆಗೆ ಸಾವಿನ ಸೆಣಸಾಟದ ರಾಬರ್ಟ್‌ ಕಾಚ್‌ ಸಂಶೋಧನೆಯ ರೋಚಕ ಸಂಗತಿಗಳನ್ನೂ ಒಳಗೊಂಡಿದೆ. ಇದಲ್ಲದೆ ಡಿಫ್ತೀರಿಯಾ, ಹಳದಿ ಜ್ವರ, Sleeping Sickness, ಸಾಕು ಪ್ರಾಣಿಗಳನ್ನೂ ನಮ್ಮನ್ನೂ ಕಾಡುವ ಹೇನು, ಉಣ್ಣೆ, ತಿಗಣೆಯ ಮೂಲಕ ಹರಿದಾಡುವ ಸೂಕ್ಷ್ಮಜೀವಿಗಳ ಬೇಟೆಯನ್ನೂ ಸಹಾ ತೆರೆದಿಡುತ್ತದೆ. ಜೊತೆಗೆ 1908 ರ ನೊಬೆಲ್‌ ಪುರಸ್ಕೃತ ಪಾಲ್‌ ಎರ್ಲಿಚ್‌ (Paul Ehrlich) ಶೋಧಗಳ ರಕ್ತಕಣಗಳ ಹುಟ್ಟಿನ (Haematology) ವಿವರಗಳಿಂದಲೂ ಸೂಕ್ಷ್ಮ ಜೀವಿಗಳ ಬೇಟೆಯನ್ನು ಕಥನಗಳಾಗಿಸಿ ವಿವರಿಸುತ್ತದೆ.      ಪಾಲ್‌ ಎರ್ಲಿಚ್‌ ರ ಸಿಫಿಲಿಸ್‌ ರೋಗಕಾರಕ ಜೀವಿಗಳ ಹುಡುಕಾಟದ ವಿವರಗಳೂ ಇಲ್ಲಿವೆ.

ಕಡೆಯಲ್ಲೊಮ್ಮೆ ಪಾಲ್‌ ಕ್ರೈಫ್‌ ತಮ್ಮ ಕೃತಿಯ ಹಿನ್ನೆಲೆಯನ್ನು ವಿವರಿಸುವುದು ಹೀಗೆ. “This plain history would not be complete if I were not to make a confession, and that is this: that I love these microbe hunters, from old Antony Leeuwenhoek to Paul Ehrlich. Not especially for the discoveries they have made nor for the boons they have brought mankind. No. I love them for the men they are. I say they are, for in my memory every man jack of them lives and will survive until this brain must stop remembering”. ಪಾಲ್‌ ಎಲ್ರಿಚ್‌ ಕಥೆಯಂತೂ ೧೯೪೦ರಲ್ಲಿ ಚಲನಚಿತ್ರವೂ ( Dr. Ehrlich’s Magic Bullet) ಆಯಿತು.  

“ಪಾಲ್‌ ಕ್ರೈಫ್‌” ಅವರ “ಮೈಕ್ರೊಬ್‌ ಹಂಟರ್ಸ್‌” – ಕಾಣದ ಜಗತ್ತಿನ ಸೂಕ್ಷ್ಮಾತಿಸೂಕ್ಷ್ಮ ಜೀವಜಗತ್ತಿನ ಬೇಟೆಯ ರೋಚಕ ವಿವರಗಳ ಅಪ್ಪಟ ವೈಜ್ಞಾನಿಕ ಪ್ರಬಂಧಗಳು ಸುಮಾರು ಮೂರು ಶತಮಾನಗಳ ವಿಹಾರವನ್ನು ಮಾನವತೆಯ ಪ್ರೀತಿಯನ್ನು ಅರಳಿಸಿದ ಕಥನಗಳಾಗಿಸಿವೆ. ಜೀವಿವಿಜ್ಞಾನದ ವಿದ್ಯಾರ್ಥಿಗಳಿಗೆ ಅದರಲ್ಲೂ ವೈದ್ಯಕೀಯ ಆಕಾಂಕ್ಷಿಗಳಿಗೆ ಈ ಪುಸ್ತಕವನ್ನು ಪರಿಚಯಿಸುವುದು ನನ್ನ ಸಹಜವಾದ ಪರಿಪಾಠ.

ಪ್ರೊ. ಕೆ. ಚಂದ್ರಶೇಖರ

ಈ ಪುಸ್ತಕವನ್ನು ನನಗೆ ಪರಿಚಯಿಸಿದ್ದು ನನ್ನ ಕೃಷಿವಿಶ್ವವಿದ್ಯಾನಿಲಯದ ಹಿರಿಯ ಗೆಳೆಯ ಕೀಟ ವಿಜ್ಞಾನದ ಪ್ರಾಧ್ಯಪಕರಾಗಿದ್ದ ಪ್ರೊ. ಕೆ. ಚಂದ್ರಶೇಖರ (ಪ್ರೀತಿಯ ಚಂದ್ರು). ಕೊರೊನಾದಲ್ಲಿ ನಮ್ಮನ್ನು ಅಗಲಿದ ಚಂದ್ರು CPUS ನ ಸಲಹೆಗಾರರೂ ಆಗಿದ್ದವರು. ಅವರಿಲ್ಲದ ಈ ಹೊತ್ತಿನಲ್ಲಿ ನನ್ನ ಬರಹಗಳಿಗೆ ಅವರು ತೋರುತ್ತಿದ್ದ ಪ್ರೀತಿಗೆ…, ಈ ಲೇಖನವು ಪ್ರೊ.ಚಂದ್ರು ನೆನಪಿಗಾಗಿ ಅರ್ಪಣೆ.

ನಮಸ್ಕಾರ

ಡಾ. ಟಿ.ಎಸ್‌ ಚನ್ನೇಶ್.‌               

Leave a Reply